ಕೂಡಿಗೆ, ಮೇ 8 : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಡೈರಿ ಸರ್ಕಲ್ ಹತ್ತಿರ ಒಳಚರಂಡಿ ವ್ಯವಸ್ಥೆ ಸರಿ ಇಲ್ಲದೆ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದ ಪರಿಣಾಮ. ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು.

ಇದರ ಹಿನ್ನೆಲೆ ಸ್ಥಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿರವಿ, ಕುಶಾಲನಗರ ವಲಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪೀಟರ್, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ ಕಾಳಪ್ಪ, ಅಧಿಕಾರಿ ಆಯಿಷಾ ಸೇರಿದಂತೆ ಮನವಿ ಸಲ್ಲಿಸಿದ ಗ್ರಾಮಸ್ಥರ ಸಮ್ಮುಖದಲ್ಲಿ ಒಳಚರಂಡಿಯ ಕಾಮಗಾರಿ ಮಾಡುವ ಬಗ್ಗೆ ಸ್ಥಳ ವೀಕ್ಷಣೆ ಮಾಡಲಾಯಿತು.

ನಂತರ ಇಂಜಿನಿಯರ್ ಪೀಟರ್ ನಕ್ಷೆಯ ಅನುಗುಣವಾಗಿ ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಮಾಡುವ ಕೆಲಸವನ್ನು ಕೈಗೊಳ್ಳಲು ಸ್ಥಳದಲ್ಲಿ ನಿಗದಿ ಮಾಡಿ ಕಾಮಗಾರಿಯನ್ನು ನಡೆಸುವಂತೆ ಕ್ರಮ ಕೃಗೊಳ್ಳಲಾಯಿತು.