ಮಡಿಕೇರಿ, ಮೇ 7: ಹೊಸ್ಕೇರಿ ಗ್ರಾಮದ ನಿವಾಸಿ ಐತ್ತಪ್ಪ ಹಾಗೂ ಗೀತಾ ಅವರ ಪುತ್ರ ಗಣೇಶ್ ಅವರ ವಿವಾಹ ಶ್ರೀಮಂಗಲ ಗ್ರಾಮ ಚೆಟ್ಟಳ್ಳಿ ನಿವಾಸಿ ಗಿರಿಜಾ ಅವರ ಮಗಳು ಸುಜಾತಳೊಂದಿಗೆ ವಧುವಿನ ಸ್ವಗೃಹ ಚೆಟ್ಟಳ್ಳಿಯ ಮನೆಯಲ್ಲಿ ಸರಳವಾಗಿ ನಡೆಯಿತು. ಬೆರಳೆಣಿಕೆಯಷ್ಟು ನೆಂಟರಿಷ್ಟರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ ವಧು, ವರರನ್ನು ಆಶೀರ್ವದಿಸಿದರು.
ವೀರಾಜಪೇಟೆ ತಾಲೂಕು ತಿತಿಮತಿ ಭದ್ರಗೋಳ ನಿವಾಸಿ ಲೋಕನಾಥ್ ಹಾಗೂ ಅನುರಾಧ ಅವರ ಪುತ್ರ ಟಿ.ಎಲ್. ಅಭಿಷೇಕ್ ಅವರ ವಿವಾಹ ನೆಲ್ಲಿಹುದಿಕೇರಿ ನಿವಾಸಿ ಕೆ. ಶಶಿ ಮತ್ತು ಸರಸು ಅವರ ಪುತ್ರಿ ಕೆ.ಎಸ್. ಪಾರ್ವತಿ ಅವರೊಂದಿಗೆ ನೆಲ್ಲಿಹುದಿಕೇರಿಯ ಸತ್ಯನಾರಾಯಣ ದೇವಾಸ್ಥಾನದ ಆವರಣದಲ್ಲಿ ಸರಳವಾಗಿ ನಡೆಯಿತು. ಎರಡು ಕಡೆಯವರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಳ ವಿವಾಹಕ್ಕೆ ಸಾಕ್ಷಿಯಾದರು.
ತಾ. 10 ರಂದು ಎರಡು ಮತ್ತು 17 ರಂದು ಎರಡು ಮದುವೆ ನಿಶ್ಚಯವಾಗಿದ್ದು, ಇದು ಕೂಡ ಸರಳವಾಗಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ. ರವಿ ತಿಳಿಸಿದ್ದಾರೆ.