ಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿಯ ಶಕ್ತಿನಗರದ ದಲಿತ ಹಾಗೂ ಬಡ ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದಿವಾಕರ್, ಮೇಕೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್, ಜಿಲ್ಲಾ ಸಂಘಟನಾ ಸಂಚಾಲಕ ರವಿ, ಕೊಡಗು ಚಾನಲ್‍ನ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ರವಿಕುಮಾರ್, ಮೇಕೇರಿ ಗ್ರಾ.ಪಂ. ಸದಸ್ಯೆ ಅರ್ಪಿತಾ ಸಂಧ್ಯಾ, ಗುತ್ತಿಗೆದಾರ ವಿಜಯ ಕುಮಾರ್ ಮತ್ತಿತರರು ಹಾಜರಿದ್ದರು.
ವೀರಾಜಪೇಟೆ: ಲಾಕ್‍ಡೌನ್‍ನಿಂದ ತವರಿಗೆ ಹೋಗದೆ ವೀರಾಜಪೇಟೆಯಲ್ಲಿ ಸಿಲುಕಿಕೊಂಡಿದ್ದ 412 ಮಂದಿ ಅಂತರರಾಜ್ಯ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಗಿದೆ. ಇಂದಿರಾ ಕ್ಯಾಂಟೀನ್ ವತಿಯಿಂದ ಪ್ರತಿದಿನ ಅಪರಾಹ್ನ ಸುಮಾರು 100 ಮಂದಿ ನಿರ್ಗತಿಕರಿಗೆ ಊಟದ ವ್ಯವಸ್ಥೆ ಹಾಗೂ 35 ಮಂದಿ ಭಿಕ್ಷುಕರಿಗೆ ಬೆಳಗಿನ ಉಪಹಾರ, ಅಪರಾಹ್ನ, ರಾತ್ರಿ ಊಟ ಜೊತೆಗೆ ವೈದ್ಯಕೀಯ ತಪಾಸಣೆ ಸೌಲಭ್ಯ ಒದಗಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.
ಪೌರ ಕಾರ್ಮಿಕರು, ಸಿಬ್ಬಂದಿಗಳು, ಹೋಮ್‍ಗಾಡ್ರ್ಸ್‍ಗಳಿಗೆ ಮಾಸ್ಕ್ ವಿತರಣೆ, ವೈದ್ಯಕೀಯ ತಪಾಸಣೆ, ಪಟ್ಟಣದಲ್ಲಿ ಶುಚಿತ್ವ ಕಾಪಾಡುವ ಕಾರ್ಮಿಕರುಗಳಿಗೆ ವಿಶೇಷ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು..
ಅನುಸೂಚಿತ ಕೊಳಚೆ ಪ್ರದೇಶಗಳಲ್ಲಿರುವ ನಿವಾಸಿಗಳು, ಮೊಗರಗಲ್ಲಿಯಲ್ಲಿರುವ ನಿರ್ಗತಿಕರು, ಕಡು ಬಡವರುಗಳಿಗೆ ಸರಕಾರದ ಆದೇಶದಂತೆ ದಿನಂಪ್ರತಿ ಕೂಡಿಗೆ ಹಾಲಿನ ಘಟಕದಿಂದ ಸರಬರಾಜಾಗುವ 210 ಲೀಟರ್‍ಗಳಷ್ಟು ಹಾಲನ್ನು ಮಾರ್ಚ್ 25ರಿಂದಲೇ ಉಚಿತವಾಗಿ ವಿತರಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಈ ವಿಭಾಗದ ಪಟ್ಟಣ ಪಂಚಾಯಿತಿ ಸದಸ್ಯರ ನಿರ್ದೇಶನದಂತೆ ನಿತ್ಯವೂ ಫಲಾನುಭವಿಗಳನ್ನು ಗುರುತಿಸಿ ಹಾಲನ್ನು ವಿತರಿಸುತ್ತಿದ್ದಾರೆ.
ಈ ವಿಭಾಗದಲ್ಲಿ ಯಾವ ಖಾಸಗಿ ವ್ಯಕ್ತಿಗಳು ಉಚಿತವಾಗಿ ಹಾಲನ್ನು ವಿತರಿಸುತ್ತಿಲ್ಲ ಎಂದು ಶ್ರೀಧರ್ ತಿಳಿಸಿದ್ದು, ತಾ. 30 ರ “ಶಕ್ತಿ” ಪತ್ರಿಕೆಯಲ್ಲಿ ವ್ಯಕ್ತಿಯೊಬ್ಬರು ತಾನು ಉಚಿತ ಹಾಲು ವಿತರಿಸಿರುವುದಾಗಿ ತಪ್ಪು ಮಾಹಿತಿ ನೀಡಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ. ಕೂಡಿಗೆಯ ಹಾಲು ಸರಬರಾಜು ಘಟಕದಿಂದ ಹಾಲು ಉಚಿತ ವಿತರಣೆಗಾಗಿ ಪಟ್ಟಣ ಪಂಚಾಯಿತಿಗೆ ಮಾತ್ರ ಸರಕಾರದ ಹಿಂದುಳಿದ ಕಡು ಬಡವರ ಸೌಲಭ್ಯಗಳ ಯೋಜನೆಗನುಗುಣವಾಗಿ ಹಾಲು ವಿತರಿಸುತ್ತಿದೆ ಎಂದು ಎ.ಎಂ. ಶ್ರೀಧರ್ ತಿಳಿಸಿದ್ದಾರೆ.
ಸೋಮವಾರಪೇಟೆ: ಕೊರೊನಾ ವೈರಸ್ ಸೋಂಕು ತಡೆಗಟ್ಟುವದು ಮತ್ತು ಚಿಕಿತ್ಸೆ ನೀಡುವಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿಗಳ ಶ್ರಮ ಶ್ಲಾಘನೀಯ ಎಂದು ಸೋಮವಾರಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ರಮೇಶ್ ಹೇಳಿದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್ ಹಾಗೂ ನಾನ್ ಕ್ಲಿನಿಕಲ್‍ನ 25 ಮಂದಿ ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಅಗತ್ಯ ಸ್ಯಾನಿಟೈಸರ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆ ಸಿಬ್ಬಂದಿಗಳು ತಮ್ಮ ಆರೋಗ್ಯಕ್ಕಿಂತಲೂ ಹೆಚ್ಚಾಗಿ ಕೋವಿಡ್ ನಿಗ್ರಹದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಿಬ್ಬಂದಿಗಳಿಗೆ ಸಮಾಜ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಸಾದ್ ಮಾತನಾಡಿ, ದೇಶದಲ್ಲಿ ಆರೋಗ್ಯ ಸಂಬಂಧಿತ ಕಾರ್ಯಗಳಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿಗಳು ತಮ್ಮ ಕುಟುಂಬವನ್ನೇ ತೊರೆದು ಸೇವಾ ಮನೋಭಾವದಿಂದ ಹೆಚ್ಚಿನ ಕರ್ತವ್ಯ ನಿರ್ವಹಿಸುತ್ತಾರೆ. ಕೋವಿಡ್‍ನಂತಹ ಮಾರಕ ಖಾಯಿಲೆ ಬಂದ ರೋಗಿಗಳನ್ನೂ ಸಹ ಗುಣಪಡಿಸಲು ಶ್ರಮವಹಿಸುತ್ತೇವೆ. ಇದರಲ್ಲಿ ಡಿ ಗ್ರೂಪ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಸಹಕಾರವೂ ಹೆಚ್ಚಿದೆ. ಇಂತಹವರಿಗೆ ಸಂಸ್ಥೆಯ ವತಿಯಿಂದ ನೆರವು ನೀಡಿರುವದು ಶ್ಲಾಘನೀಯ ಎಂದರು.
ಈ ಸಂದರ್ಭ ರೋಟರಿ ಸಂಸ್ಥೆಯ ಬಿ.ಎಸ್. ಸದಾನಂದ್, ಪಿ.ಕೆ. ರವಿ, ನಾಗೇಶ್, ಬಿದ್ದಪ್ಪ ಅವರುಗಳು ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಸುಂಟಿಕೊಪ್ಪದ ಮಾದಾಪುರ ರಸ್ತೆಯ ಬ್ಯಾಂಕ್ ಆಫ್ ಬರೋಡ (ವಿಜಯ ಬ್ಯಾಂಕ್) ವತಿಯಿಂದ ಗದ್ದೆಹಳ್ಳದ ವಿಕಾಸ ಜನಸೇವಾ ಟ್ರಸ್ಟ್ ಜೀವ&divound;ದಾರಿ ಆಶ್ರಮದಲ್ಲಿರುವ 20 ಮಂದಿಗೆ ಗೃಹೋಪಯೋಗಿ ವಸ್ತುಗಳ ಕಿಟ್‍ನ್ನು ವ್ಯವಸ್ಥಾಪಕ ವಿ. ಪ್ರತಾಪ್ ವಿತರಿಸಿದರು. ಈ ಸಂದರ್ಭ ಆಶ್ರಮದ ಅಧ್ಯಕ್ಷ ರಮೇಶ್ ಬ್ಯಾಂಕಿನ ಅಧಿಕಾರಿಗಳಾದ ಜಿ.¸ತೀಶ್, ರಾಜೇಂದ್ರಕುಮಾರ್, ಜಯ ಹೆಗ್ಡೆ, ರವಿ. ಸಿಬ್ಬಂದಿ ಟಿ.ಸಂತೋಷ್, ಸ್ವಸ್ಥ ಸಂಸ್ಥೆಯ ಸಿಬಿಆರ್ ಸಂಯೋಜಕ ಮತ್ತು ಜೆಸಿಐ ಕಾರ್ಯದರ್ಶಿ ಮುರುಗೇಶ್ ಇತರರು ಹಾಜರಿದ್ದರು,ಸೋಮವಾರಪೇಟೆ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ತೀರಾ ಸಂಕಷ್ಟಕ್ಕೆ ಸಿಲುಕಿರುವ ಬಡ ಕಾರ್ಮಿಕರ ನೆರವಿಗೆ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ರೂ. 3 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದರು.
ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿ ಆವರಣದಲ್ಲಿ ಸುಮಾರು 300 ಬಡ ಕುಟುಂಬಗಳಿಗೆ ತಲಾ 1 ಸಾವಿರ ಮೌಲ್ಯದ ಕಿಟ್‍ಗಳನ್ನು ವಿತರಿಸಲಾಯಿತು.
ಕಿಟ್‍ಗಳ ವಿತರಣೆಗೆ ಚಾಲನೆ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡ ಜನರ ನೆರವಿಗೆ ಧಾವಿಸಿರುವ ಗುತ್ತಿಗೆದಾರರ ಸೇವೆ ಶ್ಲಾಘನೀಯ ಎಂದರು.
ಸುಂಟಿಕೊಪ್ಪ: ಲಾಕ್‍ಡೌನ್‍ನಿಂದ ಕಂಗೆಟ್ಟಿರುವ ಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ಐಎನ್‍ಟಿಸಿಯಿಂದ ತರಕಾರಿ ಬೆಳೆದ ರೈತರಿಂದ ತರಕಾರಿ ಖರೀದಿಸಿ ಉಚಿತವಾಗಿ ವಿತರಿಸಲಾಯಿತು.
ರೈತರು ಬೆಳೆದ ತರಕಾರಿ ಉಪಯೋಗಕ್ಕೆ ಬರಬೇಕು. ಅವರು ನಷ್ಟ ಹೊಂದಬಾರದು ಎಂಬ ಉದ್ದೇಶದಿಂದ ತರಕಾರಿ ಬೆಳೆದ ರೈತರಿಂದಲೇ ತರಕಾರಿ ತಲೆಹೊರೆ ಕಾರ್ಮಿಕರು ಹಾಗೂ ವಾಹನ ಚಾಲಕರು ಸಂಕಷ್ಟದಲ್ಲಿರುವುದನ್ನು ಮನಗಂಡು 150 ಕಿಟ್‍ಅನ್ನು ವಿತರಿಸಲಾಗಿದೆ ಎಂದು ಐಎನ್‍ಟಿಸಿ ರಾಜ್ಯ ಉಪಾಧ್ಯಕ್ಷ ನಾಪ್ಪಂಡ ಮುತ್ತಪ್ಪ ಹೇಳಿದರು.
ಈ ಸಂದರ್ಭ ಐ.ಎನ್.ಟಿ.ಸಿ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್, ಎನ್.ಯು.ಸಿ. ಜಿಲ್ಲಾಧ್ಯಕ್ಷ ತ್ರಿಲೇಶ್, ಉಪಾಧ್ಯಕ್ಷ ಹ್ಯಾರಿಸ್, ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ, ಉಪಾಧ್ಯಕ್ಷ ಕೃಷ್ಣಪ್ಪ, ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷ ಮುತ್ತಯ್ಯ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ತ್ರಿನೇಶ್, ರಾಜಿಕ್, ರಾಜ್ಯ ಕೌನ್ಸಿಲರ್ ಹಾರಿಸ್, ಜಿಲ್ಲಾ ಉಪಾಧ್ಯಕ್ಷ ಉಸ್ಮಾನ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬುಕ್ಕರ್, ಯಾಶಿಯಲ್ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.
ವೀರಾಜಪೇಟೆ: ಬಿಳುಗುಂದ ಗ್ರಾಮ ಪಂಚಾಯಿತಿಯಲ್ಲಿ ಉಚಿತವಾಗಿ ಬಡವರಿಗೆ ಉಚಿತ ಮಾಸ್ಕ್ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಪಂಚಾಯಿತಿ ಸದಸ್ಯ ಪ್ರತಾಪ್ ಮತ್ತು ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಹಾಜರಿದ್ದರು.
ಗೋಣಿಕೊಪ್ಪಲು: ಕಾರ್ಮಿಕ ದಿನಾಚರಣೆಯ ಅಂಗವಾಗಿ ಕೊರೊನಾ ವಾರಿಯರ್ಸ್ ಆಗಿ ಕಷ್ಟದ ನಡುವೆ ಕಾರ್ಯ ನಿರ್ವಹಿಸುತ್ತಿರುವ ಗೋಣಿಕೊಪ್ಪ ಪಂಚಾಯಿತಿ ಪೌರ ಕಾರ್ಮಿಕರಿಗೆ ಪ್ರೇರಣಾ ತಂಡದಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಕೆಲವು ಛಾಯಾಗ್ರಾಹಕರುಗಳಿಗೆ ಆಹಾರ ಕಿಟ್ ವಿತರಿಸಿದರು. ತಂಡದ ಸದಸ್ಯರಾದ ಮೋರ್ಕಂಡ ಮೀನಾ ಗಣಪತಿ, ಚಿರಿಯಪ್ಪಂಡ ಲತಾ ಪೂಣಚ್ಚ, ಕೊಕ್ಕೆಂಗಡ ರಾಣಿ ಸುಬ್ರಮಣಿ, ಕೇಚೆಟ್ಟೀರ ಪದ್ಮ ಪ್ರಕಾಶ್, ನೆಲ್ಲಮಕ್ಕಡ ಪತಿಷ್ಠ ಮಾದಯ್ಯ, ಮೋರ್ಕಂಡ ನಿಖಿಲ್ ಮಂದಣ್ಣ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಶ್ರೀನಿವಾಸ್, ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮ ಕೃಷ್ಣ, ರತಿ ಅಚ್ಚಪ್ಪ ಇನ್ನಿತರರು ಹಾಜರಿದ್ದರು.ಕುಶಾಲನಗರ: ಸೋಮವಾರಪೇಟೆ ತಾಲೂಕು ಗುತ್ತಿಗೆದಾರರ ಸಂಘದ ವತಿಯಿಂದ ಕುಶಾಲನಗರ ಪಟ್ಟಣದ ಬಡ ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಕುಶಾಲನಗರ ಗುತ್ತಿಗೆದಾರ ಭವನದ ಆವರಣದಲ್ಲಿ ತಾಲೂಕು ಅಧ್ಯಕ್ಷ ಸಣ್ಣೇಗೌಡ ಹಾಗೂ ಕಾರ್ಯದರ್ಶಿ ಮುರುಳೀಧರ್ ಅವರ ನೇತೃತ್ವದಲ್ಲಿ ನೀಡಲಾಯಿತು.
ಕೊಡ್ಲಿಪೇಟೆ: ಕೊಡ್ಲಿಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಸಂಘದ ವತಿಯಿಂದ ಸ್ಥಳೀಯ ಹಾಡಿಗಳ ಬುಡಕಟ್ಟು ಜನರಿಗೆ ನಿತ್ಯ ಬಳಕೆಯ ಆಹಾರ ಮತ್ತು ಇನ್ನಿತರ ವಸ್ತುಗಳ ಕಿಟ್‍ಅನ್ನು ವಿತರಿಸಲಾಯಿತು.
ಬೆಂಬಳೂರು, ಕೆಲಕೊಡ್ಲಿ, ನವಗ್ರಾಮ ಮತ್ತು ಶಿವಪುರ ಗ್ರಾಮ ವ್ಯಾಪ್ತಿಯ ಅಸಹಾಯಕ ಬುಡಕಟ್ಟು ಕುಟುಂಬಗಳು, ವಿಶೇಷಚೇತನರು ಹಾಗೂ ವಯೋವೃದ್ಧರಿಗೆ ಅಭಿಮಾನಿಗಳ ಸಂಘ ನೆರವು ನೀಡಿತು. ಮುಂದಿನ ದಿನಗಳಲ್ಲಿ ಅಗತ್ಯವಿದ್ದವರಿಗೆ ಮತ್ತಷ್ಟು ನೆರವು ನೀಡಲಾಗುವುದು ಎಂದು ಸಂಘದ ಪ್ರಮುಖ ಜೆ.ಎಲ್. ಜನಾರ್ಧನ್ ತಿಳಿಸಿದರು. ಈ ಸಂದರ್ಭ ಸೋಮಣ್ಣ, ವೀರಭದ್ರ, ಇಂದ್ರೇಶ್, ಕಾಳಯ್ಯ ಮಾಸ್ಟರ್, ಡಿ.ಬಿ. ವಿಜಯ್, ಡಿ.ಎಸ್. ವಸಂತ, ಹೇಮಂತ್, ಮೇಘರಾಜ್, ವಿಜಯ್, ಲಂಕೇಶ್ ಮತ್ತಿತರರು ಹಾಜರಿದ್ದರು.
ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಪೌರಕಾರ್ಮಿಕರು, ನೀರು ಗಂಟಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು. ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರ ನೇತೃತ್ವದಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಅವರು ಪಂಚಾಯಿತಿ ಪೌರ ಕಾರ್ಮಿಕರುಗಳು ಹಾಗೂ ನೀರು ಗಂಟಿಗಳು ಹಾಗೂ ಆಶಾ ಕಾರ್ಯಕರ್ತೆಯರು ಕೊರೊನಾ ರೋಗದ ವಿರುದ್ಧ ನಮಗೇನು ಆಗಬಹುದು ಎನ್ನುವುದಕ್ಕಿಂತ ಜನತೆಯ ಆರೋಗ್ಯ ಕಾಪಾಡುವ ದಿಸೆಯಲ್ಲಿ ಜಾಗೃತಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಆರೋಗ್ಯ ಸಮಾಜವನ್ನಾಗಿ ಮಾಡಲು ಹಗಲು-ಇರಳು ಎನ್ನದೆ ಶ್ರಮಿಸಿರುವ ಬಗ್ಗೆ ಶ್ಲಾಘಿಸಿದ್ದರು.
ಪಂಚಾಯಿತಿ ವತಿಯಿಂದ ಅಕ್ಕಿ ಸೇರಿದಂತೆ 15 ಬಗೆಯ ದಿನಸಿ ಕಿಟ್‍ಗಳನ್ನು ಪಂಚಾಯಿತಿ ಪೌರಕಾರ್ಮಿಕರು, ನೀರು ಗಂಟಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ವಿತರಿಸಿದರು. ಈ ಸಂದರ್ಭ ಗ್ರಾ.ಪಂ. ಪಿಡಿಓ ವೇಣುಗೋಪಾಲ್, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರುಗಳಾದ ಸಿ. ಚಂದ್ರ, ಎ. ಶ್ರೀಧರ್ ಕುಮಾರ್ ಕೆ.ಇ. ಕರೀಂ, ಗಿರಿಜಾ ಉದಯಕುಮಾರ್, ನಾಗರತ್ನ ಸುರೇಶ್, ಶಿವಮ್ಮ ಮಹೇಶ್, ರತ್ನಾ, ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್ ಕುಮಾರ್, ಶ್ರೀನಿವಾಸ್, ಡಿ.ಎಂ. ಮಂಜುನಾಥ್, ಸಂಧ್ಯಾ, ಪಂಚಾಯಿತಿ ಪೌರಕಾರ್ಮಿಕರು, ನೀರು ಗಂಟಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಮಡಿಕೇರಿ: ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘ ತನ್ನ ಸದಸ್ಯರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿತು.
ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳಿಗೆ ಅಗತ್ಯ ಆಹಾರ ಧಾನ್ಯಗಳನ್ನು ನೀಡಲಾಯಿತು. ಈ ಹಿಂದೆ ಸದಸ್ಯರಿಗೆ ಅಲ್ಪ ಪ್ರಮಾಣದ ಆರ್ಥಿಕ ನೆರವು ನೀಡಲಾಗಿತ್ತಾದರೂ ತಾ. 17 ರವರೆಗೆ ಮತ್ತೆ ಲಾಕ್‍ಡೌನ್ ಮುಂದುವರೆದಿರುವುದರಿಂದ ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ. ರಮೇಶ್ ತಿಳಿಸಿದರು. ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭ ಹಾಜರಿದ್ದರು.ಸೋಮವಾರಪೇಟೆ: ಕೊರೊನಾ ವಾರಿಯರ್ಸ್‍ಗೆ ಇಲ್ಲಿನ ಬ್ಯಾಂಕ್ ಆಫ್ ಬರೋಡಾ(ಹಿಂದಿನ ವಿಜಯ ಬ್ಯಾಂಕ್)ದ ಸಿಬ್ಬಂದಿಗಳು ಮಧ್ಯಾಹ್ನದ ಭೋಜನ ಏರ್ಪಡಿಸಿ ಪ್ರೋತ್ಸಾಹ ನೀಡಿದರು.
ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿರುವ ತಾಲೂಕು ಆಸ್ಪತ್ರೆ, ವಿದ್ಯುತ್ ಇಲಾಖಾ ನೌಕರರು, ತಾಲೂಕು ಕಚೇರಿ ಸಿಬ್ಬಂದಿಗಳು, ಪಶು ವೈದ್ಯಕೀಯ ಇಲಾಖಾ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಕಲ್ಪಿಸಿದರು.
ಬ್ಯಾಂಕ್ ಆಫ್ ಬರೋಡಾ ಶಾಖೆಯ ವ್ಯವಸ್ಥಾಪಕ ಅಶೋಕ್ ವಿಮೆನ್ ಹಾಗೂ ಸಿಬ್ಬಂದಿ, ತಾಲೂಕು ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 60 ಸಿಬ್ಬಂದಿಗಳು, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು, ತಾಲೂಕಿನ ಗಡಿ ಭಾಗದಲ್ಲಿ ತಪಾಸಣೆ ಕಾರ್ಯದಲ್ಲಿ ನಿರತರಾಗಿರುವ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಚೆಟ್ಟಳ್ಳಿ: ಜಿಲ್ಲಾ ಪಂಚಾಯಿತಿ ಹಾಗೂ ಪಶು ವೈದ್ಯಕೀಯ ಇಲಾಖೆಯ ಜಂಟಿ ಆಶ್ರಯದಲ್ಲಿ ಚೆಟ್ಟಳ್ಳಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಫಲಾನುಭವಿಗಳಿಗೆ ಕೋಳಿಮರಿ ವಿತರಿಸಿದರು.
ಈ ಸಂದರ್ಭ ಸೋಮವಾರಪೇಟೆ ಪಶುಪಾಲನ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಸ್.ವಿ. ಬಾದಾಮಿ, ಚೆಟ್ಟಳ್ಳಿ ಪಶು ವೈದ್ಯಕೀಯ ಇಲಾಖೆಯ ವೈದ್ಯ ಡಾ. ಸಂಜೀವಕುಮಾರ್ ಆರ್. ಸಿಂದ್ಯೆ, ಸಿಬ್ಬಂದಿ ಮೋಸಸ್ ಹಾಗೂ ಫಲಾನುಭವಿಗಳು ಹಾಜರಿದ್ದರು.
ಸೋಮವಾರಪೇಟೆ: ಪಟ್ಟಣದ ಹಿರಿಯ ವಕೀಲ ಹಾಗೂ ನೋಟರಿಯಾಗಿರುವ ದೇವಸ್ಥಾನ ರಸ್ತೆ ನಿವಾಸಿ ಹೆಚ್.ಬಿ. ಈಶ್ವರಚಂದ್ರ ಸಾಗರ್ ಅವರು ಸೋಮವಾರಪೇಟೆ ಸುತ್ತಮುತ್ತಲ 110 ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದರು.
ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ವಕೀಲ ಪವನ್‍ಸಾಗರ್ ಮತ್ತು ಕುಟುಂಬಸ್ಥರು, ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಕರಿಬಸಪ್ಪ, ಜಾನಪದ ಪರಿಷತ್ ಹೋಬಳಿ ಅಧ್ಯಕ್ಷ ಮುರುಳೀಧರ್, ಕಾರ್ಯದರ್ಶಿ ಎಂ.ಎ. ರುಬೀನಾ ಉಪಸ್ಥಿತರಿದ್ದರು.