ಕುಶಾಲನಗರ, ಮೇ 7: ಮೈಸೂರು ಗಡಿ ಪ್ರದೇಶ ಕೊಪ್ಪ ಗ್ರಾಮದ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್-19 ಆರೋಗ್ಯ ಮಾಹಿತಿ ಕೇಂದ್ರವನ್ನು ಬೈಲುಕೊಪ್ಪ ಸಮೀಪದ ಕುಂದನಹಳ್ಳಿ ಬಳಿಗೆ ಸ್ಥಳಾಂತರಿಸಲಾಗಿದೆ.

ಇತ್ತೀಚೆಗೆ ಗಡಿ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಎಲ್ಲಾ ಮೂಲಭೂತ ಸೌಕರ್ಯ ಹೊಂದಿರುವ ಅಲ್ಲಿನ ಶಾಲೆ ಆವರಣದಲ್ಲಿ ಕೇಂದ್ರ ಪ್ರಾರಂಭಿಸಿದ್ದು ಕೊಡಗು ಜಿಲ್ಲೆಯಿಂದ ಕುಶಾಲನಗರ ಮೂಲಕ ತೆರಳುವ ವಾಹನಗಳು ಮತ್ತು ಪ್ರಯಾಣಿಕರ ಸಂಪೂರ್ಣ ಮಾಹಿತಿ ಮತ್ತು ಆರೋಗ್ಯ ತಪಾಸಣಾ ಕಾರ್ಯ ಅಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.