ಪೆÇನ್ನಂಪೇಟೆ. ಮೇ 6 : ಮಾಧ್ಯಮ ಸ್ಪಂದನ ಮನವಿಯ ಮೇರೆಗೆ, ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಕೊಡಗು ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿರುವ ಬ್ರಾಹ್ಮಣ ಅರ್ಚಕರಿಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು, ಕಿಟ್ ನೀಡುವ ಕಾರ್ಯ ಕ್ರಮಕ್ಕೆ ಬೋಧ ಸ್ವರೂಪಾನಂದ ಮಹರಾಜ್ ಚಾಲನೆ ನೀಡಿ ಧರ್ಮ ಶಿಕ್ಷಣ ಬೋಧಿಸುವ ಅರ್ಚಕರಿಗೆ ಮಾಸಿಕ 500 ರೂಪಾಯಿ ಗೌರವಧನ ನೀಡಲಾಗುವುದೆಂದು ಘೋಷಿಸಿದ್ದಾರೆ.
ಅರ್ಚಕರು ಪ್ರಸ್ತುತ ಎದುರಿಸುತ್ತಿರುವ ಪ್ರತಿಕೂಲ ಪರಿಸ್ಥಿತಿ ಅರಿತುಕೊಂಡು, ಮಾಧ್ಯಮ ಸ್ಪಂದನ ಕೋರಿಕೆಯನ್ವಯ ಜಿಲ್ಲೆಯ 170 ಅರ್ಚಕರಿಗೆ ಆಹಾರ ಕಿಟ್ ವಿತರಿಸಲಾಗುವುದೆಂದರು.
ಈ ಸಂದರ್ಭ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಮಾಧ್ಯಮ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಸ್ವಾಮೀಜಿ ಯಾವುದೇ ಪ್ರಚಾರವನ್ನು ಬಯಸದೆ ನೊಂದವರ ಸಹಾಯಕ್ಕೆ ನಿಂತಿರುವುದು ಹೆಮ್ಮೆಯ ವಿಚಾರ ಎಂದರು. ಸೋಮವಾರ ದಕ್ಷಿಣ ಕೊಡಗಿನ ಮೂವತ್ತು ಅರ್ಚಕರಿಗೆ ಕಿಟ್ ವಿತರಿಸಲಾಯಿತು. ಈ ಸಂದರ್ಭ, ಪರಹಿತಾನಂದ ಮಹರಾಜ್, ಅತುಲ್ ಮಹರಾಜ್ ಮಾಧ್ಯಮ ಸ್ಪಂದನ ತಂಡದ ಎಚ್.ಕೆ. ಜಗದೀಶ್, ಚನ್ನನಾಯಕ, ಡಿ. ನಾಗೇಶ್, ಕೊಡಗು ಜಿಲ್ಲಾ ಬ್ರಾಹ್ಮಣ ಸಮಾಜ ಕಾರ್ಯದರ್ಶಿ ಸದಾನಂದ ಪುರೋಹಿತ ಮತ್ತಿತರರು ಇದ್ದರು.