ಕೂಡಿಗೆ, ಮೇ 6: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡಿಗೆ ಡೈರಿ ಸರ್ಕಲ್ ಸಮೀಪದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದೆ ಸುರಿದ ಮಳೆಯಿಂದ ಮಳೆ ನೀರು ಚರಂಡಿಯಲ್ಲಿ ಹೋಗದೆ ಸರ್ಕಲ್‍ನಲ್ಲಿದ್ದ ಎಲ್ಲಾ ಅಂಗಡಿಗಳಿಗೆ ನುಗ್ಗಿ ಬಾರಿ ನಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಈ ಭಾಗದ 15 ಅಂಗಡಿಗಳ ಮಾಲೀಕರು ಮತ್ತು ವಾಸದ ಮನೆಯವರು ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಗ್ರಾ.ಪಂಗೆ ತೆರಳಿ ವ್ಯವಸ್ಥೆಯನ್ನು ಸರಿಪಡಿಸು ವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು..
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಯಿಷಾ, ಅಧ್ಯಕ್ಷೆ ಲಕ್ಷ್ಮೀ ರವಿ ಅವರು ಒಂದೆರಡು ದಿನಗಳಲ್ಲಿ ಒಳಚರಂಡಿ ಯಲ್ಲಿ ನೀರು ಸರಾಗವಾಗಿ ಹೋಗು ವಂತೆ ಮತ್ತು 14ನೇ ಹಣಕಾಸು ಯೋಜನೆಯ ಅಡಿಯಲ್ಲಿ ಕಾಮಗಾರಿ ಯನ್ನು ಪ್ರಾರಂಭ ಮಾಡಲಾಗುವುದು ಎಂದು ಮನವಿಯನ್ನು ಸಲ್ಲಿಸಿದ ಗ್ರಾಮಸ್ಥರಿಗೆ ಭರವಸೆ ನೀಡಿದರು.