ಕೂಡಿಗೆ, ಮೇ 4:: ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆಯ ತಂಡ ಕುಶಾಲನಗರ ಹೋಬಳಿ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಪಾರೆ ಹಾಡಿ, ಬ್ಯಾಡಗೊಟ್ಟ, ಕಂಬಾರ ಹಾಡಿ, ಹುದಗೂರು ಹಾಡಿಗಳಿಗೆ ಭೇಟಿ ನೀಡಿ ಅವರುಗಳಿಗೆ ನೀಡುವ ತಿಂಗಳ ಗುಣಮಟ್ಟದ ಆಹಾರ ವಿತರಣೆಯ ಬಗ್ಗೆ ಮಾಹಿತಿ ಪಡೆದರು.
ಹಾಡಿಯ ಎಲ್ಲಾ ಕುಟುಂಬದವರು ಕಡ್ಡಾಯವಾಗಿ ವೈದ್ಯಕೀಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಎಲ್ಲರಲ್ಲೂ ಮನವಿ ಮಾಡಿದರು. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವತಿಯಿಂದ ವಾರದಲ್ಲಿ ಒಂದು ಹಾಡಿಗೆ ಸಂಚಾರಿ ಆರೋಗ್ಯ ಘಟಕದ ವಾಹನ ಬರುತ್ತಿದೆ. ತಪಾಸಣೆ ಮಾಡಿಸಿಕೊಂಡು, ಅದರ ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭ ತಾಲೂಕಿನ ಗಿರಿಜನ ಸಮನ್ವಯಾಧಿಕಾರಿ ಶೇಖರ್ ಮಾತನಾಡಿ, ಈ ತಿಂಗಳಲ್ಲಿ ಅಂಗನವಾಡಿ ಮತ್ತು ಅಶಾ ಕಾರ್ಯಕರ್ತೆಯ ಮೂಲಕ ಹಾಡಿಯ ಜೇನುಕುರುಬ, ಕಾಡುಕುರುಬ, ಎರವ, ಸೊಲಿಗಾ, ಸೇರಿದಂತೆ ವಿವಿಧ ಜಾತಿಯ 1800 ಕುಟುಂಬದವರಿಗೆ ಆಹಾರ ವಿತರಣೆ ಮಾಡಲಾಗಿದೆ ಎಂದರು.
ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ಬಾಲಕೃಷ್ಣ ರೈ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಾಡಿಯ ಪ್ರಮುಖರು ಇದ್ದರು.