ವೀರಾಜಪೇಟೆ, ಮೇ 4: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಸರಕಾರದ ವಿವಿಧ ಇಲಾಖೆಗಳು, ಅಧಿಕಾರಿಗಳು ಅಂಬೇಡ್ಕರ್ ಜಯಂತಿ ಆಚರಣೆಯನ್ನು ಸರಳವಾಗಿ ಆಚರಿಸಿದೆ. ವೀರಾಜಪೇಟೆ ಪ.ಪಂ.ಯ ಹರಿಕೇರಿ ಕ್ಷೇತ್ರದ ಸದಸ್ಯ ವಿ.ಆರ್. ರಜನಿಕಾಂತ್ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು, ಬ್ರೆಡ್ ಹಾಗೂ ಹಣ್ಣು ವಿತರಿಸಿ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸಿದರು.