ಪಾಲಿಬೆಟ್ಟ,ಮೇ 4: ವಿಶೇಷಚೇತನ ವಿದ್ಯಾರ್ಥಿಗಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಪಾಲಿಬೆಟ್ಟ ಚೆಶೈರ್ ಹೋಂ ಮಾನವೀಯತೆ ಮೆರೆದಿದೆ.
ವೀರಾಜಪೇಟೆ, ಪಾಲಿಬೆಟ್ಟ, ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಚೆಶೈರ್ ಹೋಂ ವಿಶೇಷ ಶಾಲೆಯಲ್ಲಿ ಕಲಿಯುತ್ತಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಗೀತಾ ಚಂಗಪ್ಪ ತಿಳಿಸಿದ್ದಾರೆ.
ಶಾಲಾ ಆವರಣದಲ್ಲಿ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಪೊಲೀಸ್ ಉಪಠಾಣೆಯ ಮುಖ್ಯಪೇದೆ ಯೋಗೇಶ್, ಡಾ. ಗಣಪತಿ, ಚೆಶೈರ್ ಹೋಮ್ ಸಂಸ್ಥೆಯ ಪ್ರಮುಖರಾದ ಗೀತಾ ಚಂಗಪ್ಪ, ಆಶಾ ಸುಬ್ಬಯ್ಯ, ಪುನೀತ ರಾಮಸ್ವಾಮಿ, ಮುಖ್ಯ ಶಿಕ್ಷಕ ಶಿವರಾಜ್ ಉಪಸ್ಥಿತರಿದ್ದರು.