ಮಡಿಕೇರಿ, ಮೇ 5: ಜಿಲ್ಲೆಯಲ್ಲಿ ತಾ. 5 ರಿಂದ ತಾ. 18 ರವರೆಗೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144 ನ್ನು ಜಾರಿಗೊಳಿಸಲಾಗಿದ್ದು,
ಈ ಸಂದರ್ಭದಲ್ಲಿ ಕೊರೊನಾ ಸಂಬಂಧ ವಿತರಿಸಲಾಗಿರುವ ಅರ್ಹ ಪಾಸ್‍ಗಳನ್ನು ಹೊಂದಿ ರುವವರು ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ಹೊರತುಪಡಿಸಿ, ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸ ಲಾಗಿದೆ.