ಪೊನ್ನಂಪೇಟೆ, ಮೇ 4: ದಕ್ಷಿಣ ಕೊಡಗಿನ ವಿವಿಧೆಡೆ ಹುಲಿ ಕಾಣಿಸಿಕೊಂಡು ಜನತೆ ಆತಂಕದಲ್ಲಿ ದಿನದೂಡುತ್ತಿರುವ ಸಂದರ್ಭದಲ್ಲೇ ಕಾನೂರು ಸಮೀಪದ ಬೆಕ್ಕೆಸೊಡ್ಲೂರಿನಲ್ಲಿ ದಾಳಿ ನಡೆಸಿದ ಹುಲಿ ಹಸುವೊಂದನ್ನು ಬಲಿ ತೆಗೆದುಕೊಂಡ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಬೆಕ್ಕೆಸೊಡ್ಲೂರಿನ ಸುಳ್ಳಿಮಾಡ ಭಜನ್ ಅವರಿಗೆ ಸೇರಿದ್ದ ಅಂದಾಜು 6 ವರ್ಷ ಪ್ರಾಯದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಬೆಕ್ಕೆಸೊಡ್ಲೂರಿನ ಶಾರದಾ ಪ್ರೌಢಶಾಲೆ ಸಮೀಪದಲ್ಲಿರುವ ಕಾವೇರಿ ಕಾಲೋನಿ ಬಳಿ ಈ ಘಟನೆ ಸಂಭವಿಸಿದ್ದು, ಎಂದಿನಂತೆ ಸೋಮವಾರ ಬೆಳಿಗ್ಗೆ ಮಾಲೀಕರು ಕೊಟ್ಟಿಗೆ ಬಳಿ ತೆರಳಿದಾಗ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿರುವದು ಬೆಳಕಿಗೆ ಬಂದಿದೆ. ಭಾನುವಾರ ಮಧ್ಯರಾತ್ರಿ ಬಳಿಕ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.