ಗೋಣಿಕೊಪ್ಪ ವರದಿ, ಮೇ 4: ಗಾಳಿ, ಮಳೆಗೆ ಕೋಣಗೇರಿ ಗ್ರಾಮದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕಚ್ಚಿದ್ದು, ಪರಿಣಾಮ ಸುಮಾರು ರೂ. 3 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ.
ಅಲ್ಲಿನ ನೂರೇರ ಕುಟ್ಟಪ್ಪ ಹಾಗೂ ಕಟ್ಟೇರ ಕವನ ಎಂಬವರಿಗೆ ಸೇರಿದ 2 ಎಕರೆ ಬಾಳೆ ತೋಟದಲ್ಲಿ ಗೊನೆ ಬಿಟ್ಟು ಫಸಲು ಬರುವ ಸಂದರ್ಭದಲ್ಲಿ ನಷ್ಟ ಉಂಟಾಗಿದೆ. ಸಂಪೂರ್ಣ ಬೆಳೆ ನೆಲ ಕಚ್ಚಿದ್ದು, ಈ ಬಗ್ಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.