ಗೋಣಿಕೊಪ್ಪಲು, ಮೇ 4: ಲಾಕ್ಡೌನ್ ದಿನದಿಂದಲೂ ಚಿನ್ನದ ಅಂಗಡಿಗಳನ್ನು ಮುಚ್ಚಿದ್ದ ಕಾರಣ ಯಾರಿಗೂ ಕೂಡ ಚಿನ್ನ ಖರೀದಿಸುವ ಅವಕಾಶ ಲಭ್ಯವಿರಲಿಲ್ಲ.
ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ಜನರ ನಂಬಿಕೆಗೂ ಕೂಡ ಮಹಾಮಾರಿ ಕೊರೊನಾ ವೈರಸ್ನ ಭೀತಿ ಹುಟ್ಟಿಸಿತ್ತು. ಇದೀಗ ಜಿಲ್ಲೆಯಲ್ಲಿ ಚಿನ್ನದ ಮಳಿಗೆಗಳು ತೆರೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿರುವುದರಿಂದ ಬೆಳಿಗ್ಗೆಯಿಂದ ಸಂಜೆ 4 ಗಂಟೆಯ ವರೆಗೂ ಚಿನ್ನದ ಮಳಿಗೆಗಳು ತೆರೆದು ಮಾಲೀಕರು ಹಾಗೂ ಕೆಲಸಗಾರರು ನಿಟ್ಟುಸಿರು ಬಿಟ್ಟರು.
ಚಿನ್ನ ಖರೀದಿಸಲು ಮಳಿಗೆಗಳಿಗೆ ಆಗಮಿಸಿದ ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ನೀಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರು ಚಿನ್ನ-ಬೆಳ್ಳಿ ಖರೀದಿಸಿದರು.
- ಹೆಚ್.ಕೆ. ಜಗದೀಶ್