ಕುಶಾಲನಗರ, ಮೇ 2: ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಗೆ ಶಾಸಕ ಅಪ್ಪಚ್ಚು ರಂಜನ್ ಪರಿಹಾರದ ಚೆಕ್ ವಿತರಣೆ ಮಾಡಿದರು.

ಕೂಡಿಗೆ ಗ್ರಾಪಂ. ವ್ಯಾಪ್ತಿಯ ಎನ್.ಎಸ್.ಮುತ್ತಪ್ಪ ಅವರ ಮೇಲೆ ಕಳೆದ ನವೆಂಬರ್ ತಿಂಗಳಲ್ಲಿ ಕಾಡಾನೆಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು.

ಸಂತ್ರಸ್ತನ ಚಿಕಿತ್ಸೆಗೆ ಅರಣ್ಯ ಇಲಾಖೆ ಮೂಲಕ ಒದಗಿಸಲಾದ ರೂ. 1,90,000 ಮೊತ್ತದ ಪರಿಹಾರದ ಚೆಕ್ ಅನ್ನು ಶಾಸಕ ರಂಜನ್ ಕುಶಾಲನಗರದಲ್ಲಿ ಮುತ್ತಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭ ಸೋಮವಾರಪೇಟೆ ಎಸಿಎಫ್ ಕೊಚ್ಚೇರ ನೆಹರು, ಆರ್ ಎಫ್ ಒ ಶಮಾ, ಕೂಡಿಗೆ ಗ್ರಾಪಂ ಸದಸ್ಯ ರವಿ, ಕುಶಾಲನಗರದ ಬಿಜೆಪಿ ಪ್ರಮುಖರಾದ ಕುಮಾರಪ್ಪ, ಕೆ.ಜಿ.ಮನು, ಪುಂಡರೀಕಾಕ್ಷ, ವೈಶಾಖ್, ಮಂಡೇಪಂಡ ಬೋಸ್ ಮೊಣ್ಣಪ್ಪ ಮತ್ತಿತರರು ಇದ್ದರು.