ಸಿದ್ದಾಪುರ: ಅಮ್ಮತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಅಮ್ಮತ್ತಿಯ 70ಕ್ಕೂ ಅಧಿಕ ಆಟೋ ಚಾಲಕರಿಗೆ ಅಗತ್ಯ ವಸ್ತುಗಳನ್ನು ನೀಡಲಾಯಿತು.
ಆಟೋ ಚಾಲಕರ ಸಂಘದ ಕಾರ್ಯದರ್ಶಿ ಅಭಿಜಿತ್ ಹಾಗೂ ಇತರರು ಇತ್ತೀಚೆಗೆ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮಕ್ಕೆ ಭೇಟಿ ನೀಡಿ, ಶ್ರೀ ಬೋಧಸ್ವರೂಪಾನಂದ ಸ್ವಾಮಿಗಳ ಬಳಿ ಅಮ್ಮತ್ತಿ ಆಟೋ ಚಾಲಕರ ಬಡತನ ಹಾಗೂ ಸಂಕಷ್ಟಗಳನ್ನು ತಿಳಿಸಿದರು. ಕೂಡಲೇ ಸ್ಪಂದಿಸಿ, ಸ್ವಾಮೀಜಿಯವರು ಆಹಾರ ಕಿಟ್ ವಿತರಿಸಿ ಆಟೋ ಚಾಲಕರಿಗೆ ನೆರವಾದರು.
ಈ ಸಂದರ್ಭ ಆಶ್ರಮದ ಸ್ವಾಮೀಜಿಗಳಾದ ಅತುಲ್ ಮಹಾರಾಜ್ ಸ್ವಾಮೀಜಿ, ವೀರಾಜಪೇಟೆ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್, ಅಮ್ಮತ್ತಿಯ ಆಟೋ ಚಾಲಕ ಸಂಘದ ಕಾರ್ಯದರ್ಶಿ ಅಭಿಜಿತ್, ಪದಾಧಿಕಾರಿಗಳಾದ ಮಹೇಶ್, ರಿಚರ್ಡ್, ಕಲೀಲ್, ಇರ್ಫಾನ್, ಸಂತೋಷ್, ಅನೀಫ್ ಇತರರು ಹಾಜರಿದ್ದರು. ಈ ಸಂದರ್ಭ ಗೋಣಿಕೊಪ್ಪಲಿನ ಆದಿಶಕ್ತಿ ಮೆಡಿಕಲ್ಸ್ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿಯಲ್ಲಿ ಪಡಿತರ ಚೀಟಿ ಇಲ್ಲದ ಒಟ್ಟು 63 ಕುಟುಂಬದ ಜನರಿಗೆ (ಶನಿವಾರಸಂತೆ, ತ್ಯಾಗರಾಜ ಕಾಲೋನಿ, ಗುಂಡುರಾವ್ ಬಡಾವಣೆ) ಪಂಚಾಯಿತಿ ಕಚೇರಿ ಸಭಾಂಗಣ ಹಾಗೂ ಫಲಾನುಭವಿಗಳ ಮನೆಗೆ ಆಹಾರದ ಕಿಟ್ನ್ನು ವಿತರಿಸಲಾಯಿತು.
ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹ್ಮದ್ ಗೌಸ್ ಸರಕಾರದ ವತಿಯಿಂದ ನೀಡಲಾಗುವ ಆಹಾರ ವಸ್ತುಗಳ ಕಿಟ್ ವಿತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಸದಸ್ಯರುಗಳಾದ ಸರ್ಧಾರ್, ಉಷಾ, ಹೇಮ, ಲೆಕ್ಕ ಸಹಾಯಕ ವಸಂತ, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು. ಶಾಸಕ ಅಪ್ಪಚ್ಚು ರಂಜನ್ ಪಂಚಾಯಿರಿ ಕಚೇರಿ ಆವರಣದಲ್ಲಿ ಕಿಟ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ತಾಲೂಕಿನಲ್ಲಿ ಎರಡನೇ ಹಂತವಾಗಿ ಮತ್ತೆ ಅಂದಾಜು 3 ಸಾವಿರ ಬಡ ಕುಟುಂಬಗಳಿಗೆ ಕಿಟ್ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭ ಕೊರೊನಾ ಸೋಂಕು ತಗುಲದಂತೆ ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಸುಜಯ್ಕುಮಾರ್, ಸದಸ್ಯರು ಮತ್ತು ಪ್ರಮುಖರು ಇದ್ದರು. ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿ ಮಳೆಗಾಲದ ಅವಧಿಯಲ್ಲಿ ಪ್ರವಾಹ ಬಂದು ಬಡಾವಣೆಗಳು ಜಲಾವೃತಗೊಳ್ಳುತ್ತಿರುವ ಹಿನ್ನಲೆ ತಕ್ಷಣವೇ ಕಾವೇರಿ ನದಿ ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತ ಕ್ರಿಯಾ ಯೋಜನೆ ರೂಪಿಸಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಸಂದರ್ಭ ತಿಳಿಸಿದರು.
ಮಂಗಳವಾರ ಜಿಲ್ಲೆಗೆ ಆಗಮಿಸುವ ಉಸ್ತುವಾರಿ ಸಚಿವರೊಂದಿಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣ ಕಾಮಗಾರಿ ಪ್ರಾರಂಭಿಸಲು ಮನವಿ ಮಾಡಲಾಗುವುದು ಎಂದು ಹೇಳಿದರು.
ರೋಟರಿಯಿಂದ ಕಿಟ್ ವಿತರಣೆ: ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ 50 ಮಂದಿ ಬಡ ಕುಟುಂಬಕ್ಕೆ ಪಡಿತರ ಕಿಟ್ ವಿತರಣೆ ಮಾಡಲಾಯಿತು. ರೋಟರಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಿಟ್ ವಿತರಣೆ ನಡೆಯಿತು. ಈ ಸಂದರ್ಭ ರೋಟರಿ ಅಧ್ಯಕ್ಷ ಎಂ.ಡಿ. ಅಶೋಕ್, ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ಪ್ರಮುಖರಾದ ಎಸ್.ಕೆ. ಸತೀಶ್, ಮಹೇಶ್ ನಾಲ್ವಡೆ, ಕ್ರಿಜ್ವಲ್ ಕೋಟ್ಸ್, ಎಂ.ಡಿ. ರಂಗಸ್ವಾಮಿ, ಇನ್ನರ್ ವೀಲ್ ಕ್ಲಬ್ ಪ್ರಮುಖರು ಇದ್ದರು.ಸೋಮವಾರಪೇಟೆ: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ಪಟ್ಟಣದ ಬಡ ಆಟೋ ಚಾಲಕರುಗಳ ಕುಟುಂಬಕ್ಕೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಲಾಕ್ಡೌನ್ ಹಿನ್ನೆಲೆ ಆಟೋಗಳ ಬಾಡಿಗೆಯೂ ಇಲ್ಲದಿರುವದರಿಂದ ಆಟೋ ಚಾಲಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಬಡ ಕುಟುಂಬಗಳಿಗೆ ಯುವ ಮೋರ್ಚಾದಿಂದ ಆಹಾರದ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದು ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಬ್ಬೆಟ್ಟ ಮಧು ತಿಳಿಸಿದರು.
ಯುವ ಮೋರ್ಚಾದ ಕೊಮಾರಿ ಸತೀಶ್, ಜಗನ್ನಾಥ್, ಮಸಗೋಡು ಪ್ರಕಾಶ್, ಚಂದ್ರು, ಜೀವನ್ ಸೇರಿದಂತೆ ಇತರರು ಮನೆ ಮನೆಗೆ ತೆರಳಿ ಕಿಟ್ಗಳನ್ನು ವಿತರಿಸಿದರು.