ಕಣಿವೆ, ಮೇ 2 : ಹಾರಂಗಿ ಜಲಾಶ ಯದ ಹಿನ್ನೀರು ಪ್ರದೇಶ ದಲ್ಲಿ ಬೃಹತ್ ಗಾತ್ರದ ಮಹಶೀರ್ ಮೀನೊಂದನ್ನು ಹಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರಂಗಿಯ ಜಲಾಶಯದ ನೀರಿನಲ್ಲಿ ಮೀನು ಹಿಡಿಯಲು ಪರವಾನಗಿ ಹೊಂದಿರುವ ಕಾವೇರಿ ಮೀನು ಗಾರಿಕಾ ಸಹಕಾರ ಸಂಘಕ್ಕೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಿ ಮೀನುಗಾರಿಕಾ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿ ದ್ದಾರೆ. ಹಾರಂಗಿ ಜಲಾಶಯದಲ್ಲಿ ಅಳಿವಿನಂಚಿನಲ್ಲಿರುವ ಮಹಶೀರ್ ಮೀನನ್ನು ಸಂರಕ್ಷಿಸಬೇಕಿದೆ. ಜಲಾಶಯದಲ್ಲಿ ಮಹಶೀರ್ ಮೀನು ಹಿಡಿದ ಪ್ರಕರಣ : ಪರವಾನಗಿ ರದ್ದು
(ಮೊದಲ ಪುಟದಿಂದ) ಬೃಹತ್ ಗಾತ್ರದ ಮೀನನ್ನು ಹಿಡಿದಿರುವ ಸಂಗತಿ ಚಿತ್ರ ಸಹಿತ ಮಾಧ್ಯಮಗಳಲ್ಲಿ ವರದಿಯಾಗಿರುವುದರ ಸಂಬಂಧ ಕೊಡಗು ಜಿಲ್ಲಾ ಮೀನುಗಾರಿಕಾ ಇಲಾಖೆಯ ವರದಿಯನ್ನು ಆಧರಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಜಲಾಶಯದಲ್ಲಿ ಸಿಕ್ಕ ಮೀನನ್ನು ಜಲಾಶಯದ ನೀರಿಗೆ ವಾಪಸ್ ಬಿಡದಿರುವುದು ಮತ್ತು ಹಿಡಿದಿರುವುದು ಅಪರಾಧ ವಾಗಿರುತ್ತದೆ. ಆದ್ದರಿಂದ ಇಲ್ಲಿ ಮೀನು ಹಿಡಿಯಲು ಪರವಾನಗಿ ಪಡೆದಿರುವ ಕಾವೇರಿ ಮೀನುಗಾರರ ಸಹಕಾರ ಸಂಘದ ಮೀನು ಪಾಶುವಾರು ಹಕ್ಕಿನ ಪರವಾನಗಿಯನ್ನು ರದ್ದು ಗೊಳಿಸಲಾಗಿದೆ ಎಂದು ಬೆಂಗಳೂರಿನ ಮೀನುಗಾರಿಕಾ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.