ನಗರದ ಪೆನ್ಷನ್‍ಲೈನ್ ಮಾರ್ಗದ ಪೊಲೀಸ್ ವಸತಿ ಗೃಹದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದೆ. ಕೊರೊನಾ ಸಮಯದಲ್ಲಿ ಸಾರ್ವಜನಿಕರ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಹಿರಿಯರ ಅಗತ್ಯ ಸೇವೆಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸಾರ್ವಜನಿಕರ ಬೇಡಿಕೆಯಂತೆ ಅಗತ್ಯ ನೆರವು ಕಲ್ಪಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಬಹುತೇಕ ಹಿರಿಯರು ವ್ಯದ್ಧಾಪ್ಯವೇತನ, ವಿಧಾವಾ ವೇತನ, ವಿಶೇಷಚೇತನ ಭತ್ಯೆ, ನಿವೃತ್ತಿ ವೇತನ ಭತ್ಯೆ ನಿವೃತ್ತಿ ವೇತನ, ಔಷಧಿ ಕೊರತೆ ಆಹಾರ ಸಾಮಗ್ರಿ ಮತ್ತಿತರ ಬೇಡಿಕೆ ಈಡೇರಿಸುವಂತೆ ಕರೆ ಮಾಡುತ್ತಿದ್ದು, ಅವರುಗಳ ಬೇಡಿಕೆಗೆ ಸೂಕ್ತ ಕ್ರಮ ವಹಿಸಲಾಗುತ್ತಿದೆ. ಮನೆ ಬಾಗಿಲಿಗೆ ಅಗತ್ಯ ಸೇವೆ ನೀಡಲು ವಿವಿಧ ಉದ್ಯೋಗಿಗಳು ಮುಂದಾಗಿದ್ದಾರೆ, ಗ್ರಾಮೀಣ ಭಾಗದವರಿಗೂ ಅಗತ್ಯ ಸೇವೆ ನೀಡುವಲ್ಲೂ ಶ್ರಮಿಸುತ್ತಿದ್ದು, ಸಾರ್ವಜನಿಕರು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 08272-221215ಗೆ ಕರೆ ಮಾಡಿ ಸಹಾಯ ಪಡೆಯಬಹುದೆಂದು ಸಂಸ್ಥೆಯ ಕಾರ್ಯದರ್ಶಿ ಎಂ. ಮಹದೇವಸ್ವಾಮಿ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಸಂಪತ್ ಕುಮಾರ್ ತಿಳಿಸಿದ್ದಾರೆ.