ಕೂಡಿಗೆ, ಏ. 30: ಕೊಡಗಿನ ಗಡಿ ಭಾಗ ಹೆಬ್ಬಾಲೆ - ಸೂಳೆಕೋಟೆ ಮೂಲಕ. ಮೈಸೂರು ಜಿಲ್ಲೆಯ ಕಡೆಗೆ ಹೋಗುವ ಕಾವೇರಿ ನದಿಯ ಹತ್ತಿರ ಪೋಲಿಸ್ ಇಲಾಖೆ ವತಿಯಿಂದ ತಪಾಸಣಾ ಕೇಂದ್ರವನ್ನು ಪ್ರಾರಂಭ ಮಾಡಲಾಗಿದೆ.
ತಪಾಸಣೆ ಸಂದರ್ಭ ಪೊಲೀಸರಿಗೂ ಮಹಿಳಾ ವೈದ್ಯಾಧಿಕಾರಿಗೂ ತಪಾಸಣೆ ವಿಷಯವಾಗಿ ವಾದ, ಮಾತಿನ ಚರ್ಚೆ ನಡೆದು ಪೋಲಿಸ್ ಠಾಣೆಗೆ ಮಹಿಳಾ ವೈದ್ಯಾಧಿಕಾರಿ ದೂರು ನೀಡಿರುವ ಘಟನೆ ನಡೆದಿದೆ.
ತಪಾಸಣಾ ಕೇಂದ್ರದ ಮೂಲಕ ವೈದ್ಯಾಧಿಕಾರಿ ಕಣಗಾಲು ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಹೆಬ್ಬಾಲೆ ಕಡೆಯಿಂದ ಹೋಗುತ್ತಿದ್ದರು.
ಹೋಗಿ ಬರುವ ಸಂದರ್ಭ ಒಂದೆ ಕಾರಿನಲ್ಲಿ ನಾಲ್ಕು - ಐದು ಜನರು ಇರುವ ಬಗ್ಗೆ ವಿವರಣೆ ನೀಡುವ ಸಂದರ್ಭದಲ್ಲಿ ಮಾತಿನ ಚರ್ಚೆಗಳು ನಡೆದಿವೆ.
ವೈದ್ಯಾಧಿಕಾರಿ ತನ್ನನ್ನು ತಡೆಯಬಾರದು ಎಂಬ ವಾದ ಮಾಡಿದರೆ ಪೊಲೀಸರು ತಪಾಸಣೆ ಕೇಂದ್ರದಲಿ ಬಂದು ಹೋಗುವ ವಾಹನಗಳ ನೋಂದಣಿ ಮತ್ತು ತಪಾಸಣೆ ನಮ್ಮ ಕೆಲಸ ಎಂಬದು ಪ್ರತಿವಾದ ಮಾಡಿದರು. ಕೊನೆಯಲ್ಲಿ ವಿಚಾರ ಪೊಲೀಸ್ ಠಾಣಾ ಮೆಟ್ಟಿಲೇರಿದೆ.
- ಕೆ.ಕೆ.ಎಸ್. ಶೆಟ್ಟಿ