ಕುಶಾಲನಗರ, ಏ 29: ಕುಶಾಲನಗರ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಹಂಪಲು ಮಾರುವ ವ್ಯಾಪಾರಿಗಳ ಆರೋಗ್ಯ ತಪಾಸಣೆ ನಡೆಯಿತು. ಕೊಡಗು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಕುಶಾಲನಗರದ ಆರ್‍ಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ ಸಂತೆ ವ್ಯಾಪಾರಿಗಳಿಗೆ ಕೊರೊನಾ ವೈದ್ಯಾಧಿಕಾರಿಗಳ ತಂಡದಿಂದ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ವೈದ್ಯರಾದ ಡಾ.ಎಸ್.ಎಂ.ಭರತ್ ಮತ್ತು ತಂಡದ ಸದಸ್ಯರು ತಪಾಸಣೆ ನಡೆಸಿದರು. 100 ಕ್ಕೂ ಅಧಿಕ ಮಂದಿ ವ್ಯಾಪಾರಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.

ಈ ಸಂದರ್ಭ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅಮೃತ್ ರಾಜ್, ಡಾ.ಎ.ಪಿ.ಶೃತಿ, ತಾಲೂಕು ವೈದ್ಯಕೀಯ ಸಿಬ್ಬಂದಿಗಳಾದ ಜೆ.ಸುನಿತಾ, ಎಚ್.ಎಸ್.ವೆನಿಲಾ ಮತ್ತು ಚೇಂಬರ್ ಪದಾಧಿಕಾರಿಗಳು ಇದ್ದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿರುವ ಸಂತೆಗೆ ಭೇಟಿ ನೀಡಿದರು. ಈ ಸಂದರ್ಭ ಕೆಲವು ವ್ಯಾಪಾರಿಗಳು ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿರುವ ಬಗ್ಗೆ ಕಂಡುಬಂದು ಕೂಡಲೆ ಪೊಲೀಸರ ಮೂಲಕ ಅವರುಗಳಿಗೆ ಎಚ್ಚರಿಕೆ ನೀಡಲಾಯಿತು. ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವಂತೆ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.