ಮಡಿಕೇರಿ, ಏ. 30: ಹಲವು ವರ್ಷಗಳಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಸಹಾಯ ಮಾಡುತ್ತಾ ಬಂದಿರುವ ಅಂತರ್ರಾಷ್ಟ್ರೀಯ ಸಂಸ್ಥೆ ‘ಮಲ್ನಾಡ್ ಗಲ್ಫ್ ಅಸೋಸಿಯೇಷನ್’ ವತಿಯಿಂದ 7 ಲಕ್ಷ ಮೌಲ್ಯದ ರಂಜಾನ್ ಕಿಟ್ಟುಗಳನ್ನು ಬಡ ಮುಸ್ಲಿಂ ಕುಟುಂಬಗಳಿಗೆ ವಿತರಿಸಲಾಯಿತು.
ಸಂಸ್ಥೆಯು ಸತತ ನಾಲ್ಕು ವರ್ಷಗಳಿಂದ ಬಡ ವರ್ಗದವರಿಗೆ ರಂಜಾನ್ ಕಿಟ್ಟುಗಳನ್ನು ವಿತರಿಸುತ್ತಾ ಬಂದಿದ್ದು, ಸಂಘದ ಜಿಲ್ಲಾಧ್ಯಕ್ಷ ನೌಷಾದ್ ಜನ್ನತ್ ಅವರು ರಂಜಾನ್ ಕಿಟ್ಟುಗಳನ್ನು ಕುಶಾಲನಗರ ಇಂಡಸ್ಟ್ರಿಯಲ್ ಏರಿಯಾದ ಕರ್ನಾಟಕ ಸಾಮಿಲ್ಸ್ ನಲ್ಲಿ ವಿತರಿಸಿದರು.
ಕೊಡಗಿನ 30 ಜಮಾಅತ್ಗಳ 325 ಕುಟುಂಬಗಳಿಗೆ ಆಯಾ ಜಮಾಅತ್ ನ ಪ್ರಮುಖರ ಮೂಲಕ ಕಿಟ್ ವಿತರಿಸಲಾಯಿತು. ಈ ಸಂದರ್ಭ ಎಂ.ಜಿ.ಎ ಸಂಸ್ಥೆಯ ಕಾರ್ಯಕರ್ತರಾದ ಜಿನ್ಹಾಸ್, ಜಲೀಲ್ ಅಮ್ಮತ್ತಿ, ಫತ್ತಾಹ್ ಕಡಂಗಾ, ಅತೀಕ್, ರೋಷನ್, ಬಷೀರ್ ಹಾಗೂ ಇನ್ನಿತರರು ಇದ್ದರು.