ವೀರಾಜಪೇಟೆ, ಏ. 29 : ವೀರಾಜಪೇಟೆ ಪುರಸಭೆಯ ಮಾಜೀ ಅಧ್ಯಕ್ಷರು, ಹಿರಿಯ ವಕೀಲರೂ ಆದ ಮೇರಿಯಂಡ ಕೆ. ಪೂವಯ್ಯ ಅವರು ಪಟ್ಟಣದ ಮೊಗರಗಲ್ಲಿ ಹಾಗೂ ನೆಹರೂನಗರ (ಕೆಳಭಾಗ)ದ ಸುಮಾರು 30ರಷ್ಟು ಬಡ ಕುಟುಂಬಗಳಿಗೆ ಪ್ರತಿನಿತ್ಯ ಉಚಿತವಾಗಿ ಹಾಲು ನೀಡುವ ಮೂಲಕ ಔದಾರ್ಯತೆ ತೋರಿದ್ದಾರೆ. ಅಲ್ಪಸಂಖ್ಯಾತ ಕುಟುಂಬಗಳೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸರಕಾರದ ಲಾಕ್‍ಡೌನ್ ನಿಮಿತ್ತ ಮತ್ತು ರಂಝಾನ್ ತಿಂಗಳ ಉಪವಾಸ ಆಚರಣೆಗಾಗಿ ಈ ಕೊಡುಗೆ ನೀಡುತ್ತಿದ್ದಾರೆ.