ಮಡಿಕೇರಿ, ಏ. 30: ವೀರಾಜಪೇಟೆ ತಾಲೂಕಿನ ಆನೆಚೌಕೂರು ಹುಲಿ ಸಂರಕ್ಷಣಾ ಅರಣ್ಯ ಪ್ರದೇಶದ ಕೆ.ಎಂ. ದೊಡ್ಡಿ ವ್ಯಾಪ್ತಿಯಲ್ಲಿ ಅಬಕಾರಿ ದಾಳಿ ನಡೆಸಲಾಗಿದ್ದು, ಅಕ್ರಮ ದಂಧೆಯಂತೆ ಸಂಗ್ರಹಿಸಲಾಗಿದ್ದ 810 ಲೀ. ಪುಳಿಗಂಜಿ ವಶಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಉಪ ಅಧೀಕ್ಷಕಿ ಭಾಗ್ಯ, ಉಪ ನಿರೀಕ್ಷಕ ಬಿ.ಎಸ್. ಮೋಹನ್ ಕುಮಾರ್, ಸಿಬ್ಬಂದಿಗಳಾದ ಗೋವಿಂದ ನಾಯಕ್, ಸಂತೋಷ್ ಪೂಜಾರಿ, ಸುನಿಲ್ ಕುಮಾರ್, ನಂದಗೋಕುಲ, ಎನ್. ಗೋಪಿ ಪಾಲ್ಗೊಂಡಿದ್ದರು.