ಸಿದ್ದಾಪುರ, ಏ. 28: ಹಂಚಿಕಾಡು ಗ್ರಾಮದ ಗೌತಮ್ ಪೊನ್ನಪ್ಪ ಅವರ ತೋಟದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ತಾ. 29 ರಂದು (ಇಂದು) ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಾಚರಣೆ ಹಮ್ಮಿಕೊಂಡಿದೆ. ಹಂಚಿಕಾಡು, ಬಿಬಿಟಿಸಿ ತೋಟ, ಗೌರಿಕಾಡು ತೋಟ, ಎಮ್ಮೆಗುಂಡಿ ತೋಟ, ಆಲೀತೋಪು ತೋಟ, ಇಂಜಲಗೆರೆ ಗ್ರಾಮದ ನಿವಾಸಿಗಳು, ತೋಟದ ಕಾರ್ಮಿಕರು, ಸಾರ್ವಜನಿಕರು ಹಾಗೂ ತೋಟದ ಮಾಲೀಕರು ಎಚ್ಚರಿಕೆ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ದೀಲೀಪ್ ಕುಮಾರ್ ಕೋರಿದ್ದಾರೆ.