ಭಾಗಮಂಡಲ, ಏ. 26 : ಭಾಗಮಂಡಲ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್-19 ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಾಪಿಸಲಾದ ಪ್ರಧಾನಮಂತ್ರಿ ಪರಿಹಾರ ನಿಧಿಯ ಮೂಲಕ ರೂ.24700 ಸಂಗ್ರಹಿಸಲಾಗಿದ್ದು, ಬ್ಯಾಂಕ್ ಮುಖಾಂತರ ನಿಧಿಗೆ ಜಮೆ ಮಾಡಲಾಯಿತು. ಇದರ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ರಾಜೀವ್, ಪಂಚಾಯಿತಿ ಸದಸ್ಯರಾದ ರಾಜರೈ ಮತ್ತು ಪುರುಷೋತ್ತಮ ವಹಿಸಿದ್ದು, ಹಣವನ್ನು ಖಾತೆಗೆ ಜಮಾ ಮಾಡಲಾಯಿತು.