ಮಡಿಕೇರಿ, ಏ.25: ತಾಲೂಕಿನ 2 ನೇ ಮೊಣ್ಣಂಗೇರಿ ಮತ್ತು ಸಂಪಾಜೆ ಚಡಾವುನಲ್ಲಿಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಹಾಗೂ 10ನೇ ಮೈಲ್‍ನಲ್ಲಿಯ ದಿನಗೂಲಿ ಕಾರ್ಮಿಕರಿಗೆ, ಗ್ಲೇನ್ ಕೂರ್ಗ್ ಎಸ್ಟೇಟ್ ದೇವರಕೊಲ್ಲಿ ಮತ್ತು ಥಾಮ್ಸನ್ ಎಸ್ಟೇಟ್ ಕೊಯನಾಡು ತೋಟದ ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್‍ವಾಷ್, ಸೋಪ್ ಮತ್ತು ಸ್ಯಾನಿಟೈಸರ್‍ಗಳನ್ನು ಕಾರ್ಮಿಕ ಇಲಾಖೆ ವತಿಯಿಂದ ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯವರ ಸಹಯೋಗದಲ್ಲಿ ವಿತರಿಸಲಾಯಿತು.

ಈ ಸಂದರ್ಭ ಕಾರ್ಮಿಕರಿಗೆ ಕೋವಿಡ್-19ರ ಕುರಿತು ತಿಳುವಳಿಕೆಯನ್ನು ನೀಡುವ ಮೂಲಕ ಎಲ್ಲಾ ಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಿ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಎಸ್ಟೇಟ್‍ನ ಮಾಲೀಕರುಗಳಿಗೆ ನಿರ್ದೇಶನ ನೀಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.

ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಇತರರು ಇದ್ದರು.