ಮಡಿಕೇರಿ, ಏ.25: ಕೊಡಗು ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾ. 26 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ಬಸವ ಜಯಂತಿಯು ಸರಳವಾಗಿ ನಡೆಯಲಿದೆ.

ಬಸವ ಜಯಂತಿ ಪ್ರಯುಕ್ತ ಬಡವರಿಗೆ ಆಹಾರದ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಕೊಡಗು ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಂದೀಶ್ ತಿಳಿಸಿದ್ದಾರೆ.