ಮಡಿಕೇರಿ, ಏ. 23: ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ ತಡೆ ಅವಧಿಯನ್ನು ಪೂರೈಸಿರುತ್ತಾರೆ.

ಇತರ ಜಿಲ್ಲೆ, ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರೂ ಸೇರಿದಂತೆ 14 ದಿನಗಳೊಳಗಿರುವ ಗೃಹ ಸಂಪರ್ಕ ತಡೆಯಲ್ಲಿರುವ ಪ್ರಕರಣಗಳ ವಿವರಗಳು ಕೆಳಕಂಡಂತಿವೆ.

ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ರಾಜ್ಯದ ಇತರೆ ಜಿಲ್ಲೆಗಳ ಜನರು-755, ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಇತರೆ ರಾಜ್ಯದ ಜನರು-18, ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಒಟ್ಟು ಜನರು-773.

ಇಲ್ಲಿಯವರೆಗೆ ಒಟ್ಟು 429 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪಾಸಿಟಿವ್ ಪ್ರಕರಣಗಳು- 01 (ಪ್ರಸ್ತುತ ಗುಣಮುಖರಾಗಿದ್ದಾರೆ) ನೆಗೆಟಿವ್ ವರದಿ ಬಂದ ಪ್ರಕರಣಗಳು-299 ವರದಿ ನಿರೀಕ್ಷಿತ ಪ್ರಕರಣಗಳು-129. ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 42 ಜನರು ದಾಖಲಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.