ವೀರಾಜಪೇಟೆ, ಏ.20: ಈ ಬಾರಿಯ ಕೊಡವ ಕೌಟುಂಬಿಕ ಕ್ರಿಕೆಟ್ ಪೊರ್ಕೊಂಡ ಕಪ್ 20-20 ಪಂದ್ಯಾ ಟವನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಕ್ರಿಕೆಟ್ ಪಂದ್ಯಾಟ ಸಮಿತಿ ಅಧ್ಯಕ್ಷ ಬೋಪಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವ ಕ್ರಿಕೆಟ್ ಅಕಾಡೆಮಿ 2019ರಲ್ಲಿಯೇ ಕ್ರಿಕೆಟ್ ಪಂದ್ಯಾಟವನ್ನು ನಡೆಸಲು ಅನುಮತಿ ನೀಡಿತ್ತು. ಕಳೆದ ಬಾರಿ ನಡೆದ ಪ್ರಕೃತಿ ವಿಕೋಪದಿಂದ ಪಂದ್ಯಾಟವನ್ನು ಮುಂದೂಡಲಾಯಿತು. ಈ ಬಾರಿ ಕೊರೊನಾದಿಂದಾಗಿ ಸರ್ಕಾರ ವಿಧಿಸಿರುವ ಕಾನೂನು ನಿಯಮಗಳ ಪಾಲನೆ ಮಾಡುವ ಸಲುವಾಗಿ ಪಂದ್ಯಾಟವನ್ನು ಮುಂದೂಡಲಾಗುತ್ತಿದೆ. ಸರ್ಕಾರ ಲಾಕ್ಡೌನ್ ನಿಯಮವನ್ನು ಜಾರಿಗೆ ತರುವ ಮುಂಚೆಯೆ ಪಂದ್ಯಾಟಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾ ಗಿತ್ತು. ಸರ್ಕಾರದ ನಿಯಮವನ್ನು ಪಾಲಿಸುವ ನಿಟ್ಟಿನಲ್ಲಿ ಈ ಪಂದ್ಯಾಟಕ್ಕೆ ನೀಡಿದ ಎಲ್ಲರ ಸಹಕಾರವನ್ನು ಮುಂದಿನ ಬಾರಿಗೆ ಬಳಸಿಕೊಳ್ಳಲಾಗು ವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ತಾಂತ್ರಿಕ ನಿರ್ದೇಶಕ ಸುನೀಲ್, ಖಜಾಂಚಿ ದಿಲೀಪ್, ನಿರ್ದೇಶಕರುಗಳಾದ ತಿಮ್ಮಯ್ಯ, ಯಶವಂತ್ ಉಪಸ್ಥಿತರಿದ್ದರು.