ಕರಿಕೆ,ಏ, 20: ಕೇರಳ - ಕರ್ನಾಟಕ ಗಡಿ ಕರಿಕೆಗೆ ಶಾಸಕರಾದ ಕೆ.ಜಿ.ಬೋಪಯ್ಯ ಭೇಟಿ ನೀಡಿ ಗಡಿಯಲ್ಲಿ ಕೈಗೊಂಡಿರುವ ಭದ್ರತೆಯನ್ನು ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಸದ್ಯದ ಮಟ್ಟಿಗೆ ಅಂತರಾಜ್ಯ ಗಡಿಯನ್ನು ತೆರವುಗೊಳಿಸುವುದಿಲ್ಲ, ಭದ್ರತೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪೆÇೀಲಿಸರನ್ನು ನಿಯೋಜಿಸಲು ಕ್ರಮವಹಿಸಲಾಗುವುದು ಎಂದರು.

ಕರಿಕೆ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿಸಿ ತುರ್ತಾಗಿ ಕೆಲವು ಅಗತ್ಯ ಕಾಮಗಾರಿಯನ್ನು ನಿರ್ವಹಣೆ ಮಾಡಲು ಸೂಚನೆ ನೀಡಿದರು. ಈ ಸಂದರ್ಭ ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್,ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ನಾಯರ್,ಅಭಿವೃದ್ಧಿ ಅಧಿಕಾರಿ ಬಿಪಿನ್,ಪ್ರಮುಖರಾದ ಹೊಸಮನೆ ಹರೀಶ್, ರಮಾನಾಥ ಬೇಕಲ್, ಕೋಡಿ ಪೆÇನ್ನಪ್ಪ, ಕಾಳನ ರವಿ ಸೇರಿದಂತೆ ಇತರೆ ಪ್ರಮುಖರು ಹಾಜರಿದ್ದರು.