ಸುಂಟಿಕೊಪ್ಪ, ಏ. 20: ವಿಕಾಸ್ ಜನಸೇವಾ ಟ್ರಸ್ಟ್ ಜೀವನಾದಾರಿ ಆಶ್ರಮಕ್ಕೆ ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಭೇಟಿ ನೀಡಿ ಆಶ್ರಮದಲ್ಲಿ ನೆಲೆಸಿರುವ ಮಂದಿಗೆ ಜಾಷಧಿ ಮಾತ್ರೆಗಳನ್ನು ನೀಡಿದರು. ವಯೋವೃದ್ಧರು, ಅಂಗವಿಕಲರ ಯೋಗ ಕ್ಷೇಮ ವಿಚಾರಿಸಿದರು. ಅಲ್ಲಿ ನೆಲೆಸಿರುವ ವಯೋವೃದ್ಧರು ನಿತ್ಯ ತೆಗೆದುಕೊಳ್ಳುವ ಜಾಷಧಿ ಮಾತ್ರೆಗಳನ್ನು ನೀಡಿದರು. ಈ ಸಂದರ್ಭ ಜೀವನಾದಾರಿ ಆಶ್ರಮದ ಅಧ್ಯಕ್ಷ ರಮೇಶ್, ಸುಂಟಿಕೊಪ್ಪ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಂಜಿತ್ ಕುಮಾರ್ ಪೂಜಾರಿ ಹಾಗೂ ಸ್ವಸ್ಥ ಶಾಲೆಯ ಸಿಬಿಆರ್ ಸಂಯೋಜಕ ಮುರುಗೇಶ್ ಇದ್ದರು.