ಮಡಿಕೇರಿ, ಏ.20 : ಕೊರೊನಾ ಸೋಂಕು ಹರಡದಂತೆ ಹಗಲಿರುಳೆನ್ನದೆ ದುಡಿಯುತ್ತಿರುವ ವಿವಿಧ ಕ್ಷೇತ್ರಗಳ ಮಂದಿಗೆ ತರಕಾರಿ ಕಿಟ್‍ಗಳನ್ನು ವಿತರಿಸಲು ಮಡಿಕೇರಿ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ &divound;ರ್ಧರಿಸಿದೆ.

ತಾ.22 ರಂದು ಬೆಳಗ್ಗೆ 7 ಗಂಟೆಗೆ ನಗರದ ಮಾರುಕಟ್ಟೆ ಆವರಣದಲ್ಲಿ ನಗರಸಭೆಯ ಸ್ವಚ್ಛತಾ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಹಾಗೂ ಬಡ ಕುಟುಂಬಗಳಿಗೆ ತರಕಾರಿಯನ್ನು ಉಚಿತವಾಗಿ ನೀಡಲಾಗುವುದೆಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಸಂಪರ್ಕ ಸಂ : 94827 89311, 94833 92531