ಸೋಮವಾರಪೇಟೆ, ಏ. 20: ಲಾಕ್‍ಡೌನ್ ಹಿನ್ನೆಲೆ ಕಡುಬಡವರಿಗೆ ಆಗತ್ಯ ವಸ್ತುಗಳನ್ನು ವಿತರಿಸಲು ಜಿಲ್ಲಾಡಳಿತ ಜಾರಿಗೆ ತಂದಿರುವ ಹಸಿವು ‘ಹೊಟ್ಟೆಗೆ- ತಣಿವು ಪೆಟ್ಟಿಗೆ’ ಕಾರ್ಯಕ್ರಮಕ್ಕೆ ಪಟ್ಟಣದ ಹಿರಿಯ ವಕೀಲ ಈಶ್ವರ್‍ಚಂದ್ರ ವಿದ್ಯಾಸಾಗರ್ ಅವರು ಆಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ತಹಶೀಲ್ದಾರ್ ಗೋವಿಂದರಾಜು ಅವರು ಸಾಮಾಗ್ರಿಗಳನ್ನು ಸ್ವೀಕರಿಸಿದರು.
ಈ ಸಂದರ್ಭ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಪಪಂ ಮುಖ್ಯಾಧಿಕಾರಿ ರಮೇಶ್ ಉಪಸ್ಥಿತರಿದ್ದರು.