ಮಡಿಕೇರಿ, ಏ. 19: ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಅವರ ‘ಸದಾ ಸ್ಮಿತಾ ಫೌಂಡೇಷನ್’ ವತಿಯಿಂದ ತಾ. 20 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಪಿಪಿ ಕಿಟ್, ಮಾಸ್ಕ್, ಸ್ಯಾನಿಟೈಷರ್‍ನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ವಿತರಿಸಲಿ ದ್ದಾರೆ. ಸಂಸ್ಥೆಯ ಕಡ್ಲೇರ ಕೀರ್ತನ್, ಡಾ.ರವಿಚಂದ್ರ, ಗಣಿ ಪ್ರಸಾದ್, ಕೆ.ಎಸ್. ಭೀಮಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.