ಗೋಣಿಕೊಪ್ಪ ವರದಿ, ಏ. 18: ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಅಮ್ಮಕೊಡವ ಕೌಟುಂಬಿಕ ಹೆಮ್ಮಚ್ಚಿಮನೆ ಕ್ರಿಕೆಟ್ ಟೂರ್ನಿಯನ್ನು ಕೊರೊನಾ ವೈರಸ್ ಹಿನ್ನೆಲೆ ಈ ವರ್ಷದ ಮಟ್ಟಿಗೆ ರದ್ದುಪಡಿಸಲಾಗಿದೆ ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ವೇಣುಗೋಪಾಲ್ ಮತ್ತು ಹೆಮ್ಮಚ್ಚಿಮನೆ ಕುಟುಂಬ ಕಾರ್ಯದರ್ಶಿ ಹೆಮ್ಮಚ್ಚಿಮನೆ ಆಶಿತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.