ವೀರಾಜಪೇಟೆ, ಏ. 15: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸ್ವಚ್ಛತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 60 ಮಂದಿ ಪೌರ ನೌಕರರಿಗೆ ಕೊರೊನಾ ವೈರಸ್ ಕುರಿತು ತಪಾಸಣೆ ನಡೆಸಲಾಯಿತು. ವೀರಾಜಪೇಟೆ ಪುರಭವನದಲ್ಲಿ ಡಾ:ನವೀನ್ ಅವರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿಯರ ಸಹಕಾರದೊಂದಿಗೆ ವೈದ್ಯಕೀಯ ತಪಾಸಣೆ ನಡೆಸಿದರು. ಇದೇ ಸಂದರ್ಭ ಇಲ್ಲಿನ ಸಮುಚ್ಚಯ ನ್ಯಾಯಾಲಯದ ಸಿವಿಲ್ ಜಡ್ಜ್ ನ್ಯಾಯಾಧೀಶ ಡಿ. ಆರ್. ಜಯಪ್ರಕಾಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಆರ್.ಶ್ರೀಧರ್, ಸಹಾಯಕ ಅಭಿಯಂತರ ಎನ್. ಪಿ. ಹೇಮ್ಕುಮಾರ್, ಸಿಬ್ಬಂದಿ ಹಾಜರಿದ್ದರು.