ಮಡಿಕೇರಿ, ಏ. 14: ಕೊಡವರ ಹೊಸ ವರ್ಷಾಚರಣೆಯ ದಿನವಾಗಿರುವ ಎಡಮ್ಯಾರ್ ಒಂದನ್ನು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆ ವತಿಯಿಂದ ಸರಳವಾಗಿ ಆಚರಿಸಲಾಯಿತು. ವರ್ಷಂಪ್ರತಿ ಎತ್ತು ಕಟ್ಟಿ ಗದ್ದೆ ಉಳುಮೆ ಮಾಡುವ ಕೆಲಸಕ್ಕೆ ಚಾಲನೆ ನೀಡುವ ಶಾಸ್ತ್ರದೊಂದಿಗೆ ಪಂಜಿನ ಮೆರವಣಿಗೆ-ಸಭಾ ಕಾರ್ಯದೊಂದಿಗೆ ನಡೆಯುತ್ತಿದ್ದ ಕಾರ್ಯಕ್ರಮವನ್ನು ಈ ಬಾರಿ ಬೆಟ್ಟಗೇರಿಯಲ್ಲಿ ಕೇವಲ ಗದ್ದೆ ಉಳುಮೆ ಮಾಡುವ ಮೂಲಕ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹಾಗೂ ಕೆಲವರು ಆಚರಿಸಿದರು.