ಮಡಿಕೇರಿ, ಏ.13: ತಾಲೂಕಿನ ಚೆಂಬು ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಆರೋಪಿ ಬಾಬು ಕೆ.ಕೆ ಪರಾರಿಯಾಗಿದ್ದಾರೆ.
ಕಳ್ಳಭಟ್ಟಿ ತಯಾರಿಸಿ ಮಾರಾಟಕ್ಕೆ ಸಂಗ್ರಹಿಸಿಡಲಾಗಿದ್ದ 2 ಲೀಟರ್ ಗೇರು ಹಣ್ಣಿನ ಕಳ್ಳಭಟ್ಟಿ, 45 ಲೀಟರ್ ಗೇರು ಹಣ್ಣಿನ ಪುಳಿಗಂಜಿ ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಆರೋಪಿ ಪರಾರಿಯಾಗಿದ್ದು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕರಾದ ಆರ್.ಎಂ.ಚೈತ್ರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಅನಿಲ್ ಜಿ.ಅರ್., ಅಬಕಾರಿ ರಕ್ಷಕರಾದ ಹಂಜದ್ ಕೆ.ಎಸ್., ರಾಜು ಎಚ್.ಎಸ್., ಲಕ್ಷ್ಮೀದೇವಿ ಎಸ್. ಭಾಗವಹಿಸಿದ್ದರು.