ಕೂಡಿಗೆ, ಏ. 12 : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದಲ್ಲಿರುವ ಹುಣಸೆಪಾರೆ ಹಾಡಿ ಜನರಿಗೆ ಪಡಿತರ ಕಿಟ್ ವಿತರಣೆ ಮಾಡಲಾಯಿತು.ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮ ಲೀಲಾ ಸರಕಾರದ ವತಿಯಿಂದ ನೀಡಲಾಗುವ ಪಡಿತರ ಅಹಾರ ವಸ್ತುಗಳ ಕಿಟ್ಗಳನ್ನು ಹಾಡಿಯ 20 ಕುಟುಂಬಕ್ಕೆ ವಿತರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಹಾಗೂ ಬೋಮೇಗೌಡನ ಚಿಣ್ಣಪ್ಪ, ಕರವಸೂಲಿಗಾರ ಅನಿಲ್ ಮತ್ತು ಸಿಬ್ಬಂದಿ ಇದ್ದರು.