*ಗೋಣಿಕೊಪ್ಪ, ಏ. 11: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿ ನಿವಾಸಿಗಳಿಗೆ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ವಿವಿಧ ತರಕಾರಿಗಳನ್ನು ಸಮಾಜ ಸೇವಕಿ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ವಿತರಿಸಿದರು. ರೇಷ್ಮೆ ಹಡ್ಲು, ದೇವಮಚ್ಚಿ, ಮಜ್ಜಿಗೆಹಳ್ಳ, ಸೇರಿದಂತೆ ಇತರ ಹಾಡಿಗಳಿಗೆ ತರಕಾರಿ ಹಂಚಲಾಯಿತು.

ರಾಜ್ಯ ಮಾನವ ಹಕ್ಕು ಸಮಿತಿಯ ಉಪಾಧ್ಯಕ್ಷೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರ ಸಹಕಾರದೊಂದಿಗೆ ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಉಪಸ್ಥಿತಿಯಲ್ಲಿ ಹಾಡಿ ನಿವಾಸಿಗಳಿಗೆ ತರಕಾರಿ ನೀಡಿದರು. ಜಿಲ್ಲಾ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಆದಿ ಮಂಜುಳಾ, ಗಾಂಧಿನಗರದ ಮಂಜುನಾಥ್ ಉಪಸ್ಥಿತರಿದ್ದರು.