ಗೋಣಿಕೊಪ್ಪ ವರದಿ, ಏ. 11: ಮುಂದಿನ ಒಂದು ವಾರಗಳ ಕಾಲ ಹೆಚ್ಚು ಮುಂಜಾಗ್ರತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸ್ಥಳೀಯ ವೈದ್ಯ ಡಾ. ಕೆ.ಎನ್. ಚಂದ್ರಶೇಖರ್ ಸಲಹೆ ನೀಡಿದರು.
ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಸ್ಥಳೀಯ ಪತ್ರಕರ್ತರಿಗೆ ಅಗತ್ಯ ಕಿಟ್ ವಿತರಣೆ ಸಂದರ್ಭ ಸಲಹೆ ನೀಡಿದರು. ಆದಷ್ಟು ಸಾಮಾಜಿಕ ಅಂತರ ಕಾಯುವುದು, ಕುಟುಂಬಕ್ಕೆ ತೊಂದರೆಯಾಗದ ರೀತಿಯಲ್ಲಿ ವೃತ್ತಿ ನಿಭಾಯಿಸುವುದನ್ನು ಅರಿತು ಮುನ್ನಡೆಯಬೇಕಿದೆ. ಸೋಂಕು ಹರಡದಂತೆ ನಾವು ನಮ್ಮನ್ನೇ ರಕ್ಷಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನೆವಿನ್, ಪ್ರಮುಖರಾದ ಪ್ರಮೋದ್ ಕಾಮತ್, ಅಜ್ಜಿಕುಟ್ಟೀರ ಚಂಗಪ್ಪ, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯದರ್ಶಿ ಹೆಚ್.ಕೆ. ಜಗದೀಶ್ ಇದ್ದರು.