ಮಡಿಕೇರಿ, ಏ. 11: ಕೊಡಗು ಜಿಲ್ಲೆಯಲ್ಲಿ ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕ್ಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ 14 ದಿನಗಳ ಸಂಪರ್ಕ ತಡೆ ಅವಧಿಯನ್ನು ಪೂರೈಸಿದ್ದಾರೆ.
ಉಳಿದಂತೆ ಸ್ವಯಂ ವರದಿ ಅವಧಿಯಲ್ಲಿರುವ ಪ್ರಕರಣಗಳು ಮತ್ತು 14 ದಿನಗಳೊಳಗಿರುವ ಪ್ರಕರಣಗಳ ಬಾಬ್ತು ಗೃಹ ಸಂಪರ್ಕ ತಡೆಯಲ್ಲಿರುವ ಪ್ರಕರಣಗಳ ವಿವರಗಳು ಕೆಳಗಿನಂತಿದೆ.
* ದೆಹಲಿಯ ಧಾರ್ಮಿಕ ಸಮ್ಮೇಳನ ಸಂಬಂಧ ಜಿಲ್ಲೆಯಿಂದ ದೆಹಲಿಗೆ ತೆರಳಿ ಹಿಂತಿರುಗಿರುವವರು -14
* ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ರಾಜ್ಯದ ಇತರೆ ಜಿಲ್ಲೆಗಳ ಜನರು-248
* ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಇತರೆ ರಾಜ್ಯಗಳ ಜನರು-11
* ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವ ಒಟ್ಟು ಜನರು-273
ಇಲ್ಲಿಯವರೆಗೆ ಒಟ್ಟು 89 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಹಾಲಿ ದೃಢಪಟ್ಟಿದ್ದ 1 ಪ್ರಕರಣ ಗುಣಮುಖರಾಗಿರುವುದರಿಂದ ಒಟ್ಟು 83 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿರುತ್ತದೆ. 6 ಪ್ರಕರಣಗಳಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ. ಪ್ರಸ್ತುತ ಕೋವಿಡ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿ ಯಾವುದೇ ಪ್ರಕರಣಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.