ನಾಪೆÇೀಕ್ಲು, ಏ. 11 : ನಗರದಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬದವರು ಆಟೋ ರಿಕ್ಷಾವನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು; ದೇಶವನ್ನು ಲಾಕ್‍ಡೌನ್ ಮಾಡಲಾಗಿದೆ. ದಿನ ನಿತ್ಯ ದುಡಿದು ತಮ್ಮ ಜೀವನವನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ ಚಾಲಕರು ದುಡಿಮೆ ಇಲ್ಲದೆ; ಊಟಕ್ಕೂ ಅಲೆದಾಡುವ ಪರಿಸ್ಥಿತಿ ಇದ್ದು ಬಾಡಿಗೆ ಮನೆಯಲ್ಲಿ ಜೀವನÀ ಸಾಗಿಸುತ್ತಿರುವ ಕುಟುಂಬಗಳು ಬಾಡಿಗೆ ನೀಡಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಸರಕಾರ ಆಟೋ ರಿಕ್ಷಾ ಕುಟುಂಬದವರಿಗೆ ಬದುಕಲು ಬೇಕಾದ ಆಹಾರ ವಿತರಿಸಬೇಕೆಂದು ನಾಪೆÇೀಕ್ಲು ವಾಹನ ಮಾಲೀಕ ಮತ್ತು ಚಾಲಕರ ಸಂಘವು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದೆ.