ಮಡಿಕೇರಿ, ಏ. 11: ತಾಲೂಕಿನ ಮೇಕೇರಿ ಗ್ರಾಮದ ಸುಭಾಶ್ ನಗರದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ತಹಶೀಲ್ದಾರರ ಮೂಲಕ ಮಾಸ್ಕ್ ಮತ್ತು ಹ್ಯಾಂಡ್ ವಾಶ್ ಸೋಪ್‍ಗಳನ್ನು ಮತ್ತು ಕೋವಿಡ್-19ರ ಕುರಿತು ಮಾಹಿತಿಯ ಕರಪತ್ರಗಳನ್ನು ವಿತರಿಸಲಾಯಿತು. ಕಾರ್ಮಿಕರ ಕುಂದು ಕೊರತೆಗಳ ಕುರಿತು ವಿಚಾರಿಸಲಾಯಿತು.
ಈ ಸಂದರ್ಭ ತಹಶೀಲ್ದಾರ್ ಪಿ.ಎಸ್. ಮಹೇಶ, ಕಾರ್ಮಿಕಾಧಿಕಾರಿ ಎಂ.ಎಂ. ಯತ್ನಟ್ಟಿ, ರೆಡ್‍ಕ್ರಾಸ್ ಸಂಸ್ಥೆ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಮುರಳೀಧರ್ ಇತರರು ಇದ್ದರು.