ಗುಡ್ಡೆಹೊಸೂರು, ಏ. 10: ಬೈಲ್‍ಕೊಪ್ಪದ ಟಿಬೇಟಿಯನ್ 5ನೇ ಕ್ಯಾಂಪ್‍ನ ಎನ್.ಜಿ.ಓ. ಗಳಾದ ರಿಚ್ಚನ್ ಮತ್ತು ಲಾಝಾಮಾತಾಕೋ ಅವರುಗಳು ಬೀದಿ ಬದಿಯಲ್ಲಿ ರುವ ಶ್ವಾನಗಳಿಗೆ ಹಾಲು ಮತ್ತು ಅನ್ನವನ್ನು ನೀಡಿ ಮಾನ ವೀಯತೆ ಮೆರೆಯುತ್ತಿದ್ದಾರೆ. ಇವರುಗಳು ಸುಮಾರು 10 ದಿನಗಳಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ.

ಮಹಾಮಾರಿ ಕೊರೊನಾ ವೈರಸ್‍ನ ತೊಂದರೆಯಿಂದಾಗಿ ಲಾಕ್‍ಡೌನ್ ಆದ ಕಾರಣ ರಸ್ತೆ ಬದಿಯ ಎಲ್ಲಾ ಹೊಟೇಲ್‍ಗಳು ಬಂದ್ ಆಗಿ ಜನರ ಓಡಾಟ ಕಡಿಮೆಯಾಗಿ ಶ್ವಾನಗಳಿಗೆ ಆಹಾರವಿಲ್ಲದಂತಾಗಿದೆ.

ದ್ವಿಚಕ್ರ ವಾಹನದಲ್ಲಿ ಸುಮಾರು 40 ಲೀಟರ್ ಹಾಲು ಮತ್ತು ಅನ್ನವನ್ನು ತಂದು ಬೀದಿಬೀದಿಗಳಿಗೆ ತೆರಳಿ ಈ ಕಾರ್ಯ ನಡೆಸುತ್ತಿದ್ದಾರೆ.