ಗೋಣಿಕೊಪ್ಪ, ವರದಿ, ಏ. 8 : ಬುಧವಾರ ಮಧ್ಯಾಹ್ನ ಗೋಣಿಕೊಪ್ಪ ಸುತ್ತಮುತ್ತ ಸುರಿದ ಮಳೆಯಿಂದ ಅತ್ತೂರು ಎಂಬಲ್ಲಿ ಮುಖ್ಯರಸ್ತೆಯಲ್ಲಿ ಮರ ಬಿದ್ದು ಸ್ವಲ್ಪ ಸಮಯ ಗೋಣಿಕೊಪ್ಪ - ಪಾಲಿಬೆಟ್ಟ ರಸ್ತೆ ಬಂದ್ ಆಗಿತ್ತು. ಗ್ರಾಮಸ್ಥರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ.