ಮಡಿಕೇರಿ, ಏ. 8: ಮಡಿಕೇರಿ ನಗರಸಭಾ ವತಿಯಿಂದ ಉಚಿತ ಹಾಲು ವಿತರಣಾ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತರು ಇಂದು ಚಾಲನೆ ನೀಡಿದರು. ನಗರದ ಮಂಗಳಾದೇವಿನಗರ, ಇಂದಿರಾನಗರ, ತ್ಯಾಗರಾಜ ಕಾಲೋನಿ, ಚಾಮುಂಡೇಶ್ವರಿನಗರ, ಪುಟಾಣಿನಗರ ಹಾಗೂ ಅಶೋಕಪುರದ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 1 ಲೀಟರ್ ಹಾಲು ವಿತರಿಸಲಾಯಿತು. ಈ ಸಂದರ್ಭ ನಗರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ವೀರಾಜಪೇಟೆ : ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ಉಚಿತ ಹಾಲು ವಿತರಣೆಗೆ ಚಾಲನೆ ನೀಡಿ ಮನೆ ಮನೆಗೆ ಹಾಲು ವಿತರಣೆ ಮಾಡಲಾಯಿತು. ತರಕಾರಿ ಇನ್ನಿತರ ವಸ್ತುಗಳನ್ನು ಮನೆಗೆ ವಾಹನಗಳ ಮೂಲಕ ಮಾರಾಟ ವ್ಯವಸ್ಥೆ ಮಾಡಲಾಗಿದ್ದರಿಂದ ಹೆಚ್ಚು ಜನರು ಪಟ್ಟಣಕ್ಕೆ ಬಂದು ಖರೀದಿ ಮಾಡಬೇಕು ಎನ್ನುವ ಪರಿಸ್ಥಿತಿ ಇರಲಿಲ್ಲ. ಎಲ್ಲವೂ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾಡಿದರು. ವೀರಾಜಪೇಟೆ ಡಿವೈಎಸ್ಪಿ ಎಸ್. ಜಯಕುಮಾರ್, ಠಾಣಾಧಿಕಾರಿ ಮರಿಸ್ವಾಮಿ, ಪೆÇಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಸಾಥ್ ನೀಡಿದರು. ಪಟ್ಟಣದಾದ್ಯಂತ ಪೆÇಲೀಸ್ ಇಲಾಖೆ ಸೂಕ್ತ ಬಿಗಿ ಬಂದೋ ಬಸ್ತ್ ಕಲ್ಪಿಸಿದ್ದರು.
ಕುಶಾಲನಗರ : ಕುಶಾಲನಗರ ಪಟ್ಟಣ ಪಂಚಾಯ್ತಿಯಿಂದ ಬಡವರಿಗೆ ಒದಗಿಸುತ್ತಿರುವ ಉಚಿತ ಹಾಲನ್ನು ಶಾಸಕ ಅಪ್ಪಚ್ಚುರಂಜನ್ ವಿತರಣೆ ಮಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡುತ್ತಿರುವ ಹಾಲನ್ನು ಶಾಸಕ ರಂಜನ್ ಕಾಳಮ್ಮ ಕಾಲನಿಯಲ್ಲಿ ಮನೆಮನೆಗೆ ತೆರಳಿ ಸಾಂಕೇತಿಕವಾಗಿ ವಿತರಿಸಿದರು. ಕೊರೊನಾ ಬಗ್ಗೆ ಎಚ್ಚರ ವಹಿಸುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭ ಮುಖ್ಯಾಧಿಕಾರಿ ಸುಜಯ್ ಕುಮಾರ್, ಆರೋಗ್ಯಾಧಿಕಾರಿ ಉದಯಕುಮಾರ್, ಅಭಿಯಂತರೆ ಶ್ರೀದೇವಿ, ಸಿಬ್ಬಂದಿಗಳು ಇದ್ದರು.