ಕುಶಾಲನಗರ, ಏ. 8: ಕುಶಾಲನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು.
ಸ್ಥಳೀಯ ಪ್ರವಾಸಿ ಮಂದಿರ ಆವರಣದಲ್ಲಿ ಅಗತ್ಯವುಳ್ಳ ಪತ್ರಕರ್ತರಿಗೆ ದಿನಸಿ ಮತ್ತಿತರ ವಸ್ತುಗಳ ಕಿಟ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಳೆದ 15 ದಿನಗಳಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಿಕೆ, ಮಾಧ್ಯಮ ಸದಸ್ಯರ ಹಾಗೂ ಪತ್ರಿಕಾ ವಿತರಕರ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜನರಿಗೆ ಕೊರೊನಾ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವುದರೊಂದಿಗೆ ಪ್ರತಿಯೊಬ್ಬರ ರಕ್ಷಣೆಯಲ್ಲಿ ಪತ್ರಕರ್ತರ ಪಾತ್ರ ಅತಿಮುಖ್ಯವಾಗಿದೆ ಎಂದರು.
ಈ ಸಂದರ್ಭ ಕುಶಾಲನಗರ ಪಪಂ ಸದಸ್ಯ ಅಮೃತ್‍ರಾಜ್, ಮುಖ್ಯಾಧಿಕಾರಿ ಸುಜಯ್ ಕುಮಾರ್, ಬಿಜೆಪಿ ಪ್ರಮುಖರಾದ ಎಂ.ಎನ್.ಕುಮಾರಪ್ಪ, ಭಾರತೀಶ್, ವೈಶಾಖ್, ಉಮಾಶಂಕರ್, ಪುಂಡರೀಕಾಕ್ಷ, ಆದರ್ಶ್, ಶಿವಶಂಕರ್ ಮತ್ತಿತರರು ಇದ್ದರು.
ತಾಲೂಕು ರೆಡ್‍ಕ್ರಾಸ್ ಘಟಕ ಮತ್ತು ಕಾರ್ಮಿಕ ಇಲಾಖೆ ಮತ್ತು ವಾರ್ತಾ ಇಲಾಖೆ ವತಿಯಿಂದ ಸ್ಥಳೀಯ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ನಡೆಯಿತು. ರೋಟರಿ ಸಭಾಂಗಣದಲ್ಲಿ ಸುಮಾರು 15 ಕ್ಕೂ ಅಧಿಕ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ಮಾಸ್ಕ್ ಮತ್ತು ಸಾನಿಟೈಸರ್ ನೀಡಿದರು. ಇದೇ ಸಂದರ್ಭ ಸುಮಾರು 50 ಮಂದಿ ಕಾರ್ಮಿಕರಿಗೆ ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಲೀನಾ, ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ರವೀಂದ್ರ, ರೆಡ್‍ಕ್ರಾಸ್ ತಾಲೂಕು ಅಧ್ಯಕ್ಷ ಎಸ್.ಕೆ.ಸತೀಶ್, ಶೋಭಾ ಸತೀಶ್, ರೋಟರಿ ಅಧ್ಯಕ್ಷ ಎಂ.ಡಿ.ಅಶೋಕ್, ಪ್ರಮುಖರಾದ ಸುನೀತಾ ಮಹೇಶ್, ಡಾ. ಹರಿ ಎ.ಶೆಟ್ಟಿ, ಕೆ.ಪಿ. ಚಂದ್ರಶೇಖರ್, ಮಹೇಶ್ ನಾಲ್ವಡೆ, ಎಂ.ಡಿ.ರಂಗಸ್ವಾಮಿ, ಶಿಬು, ಇದ್ದರು.