ವೀರಾಜಪೇಟೆ, ಏ. 8: ಅಮ್ಮತ್ತಿಯಿಂದ ಅಕ್ರಮವಾಗಿ ವಧೆ ಮಾಡಲು ಎಂಜಿಲಗೆರೆ ಗ್ರಾಮಕ್ಕೆ ಸಾಗಿಸುತ್ತಿದ್ದ ಎರಡು ಹಸುಗಳನ್ನು ಅದರ ಜೊತೆಯಲ್ಲಿಯೇ ಹಿಂಬಾಲಿಸುತ್ತಿದ್ದ ಎರಡು ಬೈಕ್‍ಗಳನ್ನು ಅಮ್ಮತ್ತಿಯ ಸಿದ್ದಾಪುರ ರಸ್ತೆಯಲ್ಲಿ ವಶಪಡಿಸಿಕೊಂಡು ಇಲ್ಲಿನ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ ಘಟನೆ ನಿನ್ನೆ ದಿನ ರಾತ್ರಿ 10 ಗಂಟೆಗೆ ನಡೆದಿದೆ.ಎಂಜಿಲಗೆರೆಯ ಮೂರು ಮಂದಿ ಅಮ್ಮತ್ತಿಯ ಕೆ.ಎಂ.ಅಂದು ಎಂಬವರಿಂದ ಎರಡು ಹಸುಗಳನ್ನು ಖರೀದಿಸಿ ರಾತ್ರಿ 9 ಗಂಟೆಯ ಸಮಯದಲ್ಲಿ ಎಂಜಿಲಗೆರೆಗೆ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಎರಡು ಹಸುಗಳು ಹಾಗೂ ಎರಡು ಬೈಕ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಕಾರ್ಯಕರ್ತರು ಹಸುಗಳನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಹಸುಗಳನ್ನು ಖರೀದಿಸಿದವರು, ಹಿಂಬಾಲಿಸುತ್ತಿದ್ದ ಎರಡು ಬೈಕ್‍ಗಳ ಚಾಲಕರು ಪರಾರಿಯಾಗಿದ್ದಾರೆ.ಅಕ್ರಮ ವಧೆಗೆ ಹಸುವನ್ನು ಸಾಗಿಸಿ ಹಸುಗಳನ್ನು ವಶ ಪಡಿಸಿಕೊಳ್ಳುವ ಸಮಯದಲ್ಲಿ
(ಮೊದಲ ಪುಟದಿಂದ) ಗ್ರಾಮಾಂತರ ಪೊಲೀಸ್ ಠಾಣೆಯ ಮೂರು ಮಂದಿ ಪೊಲೀಸ ರಿದ್ದರೆಂದೂ ಕಾರ್ಯಕರ್ತರುಗಳು ತಿಳಿಸಿದ್ದು, ಹಸುಗಳನ್ನು ಅಕ್ರಮ ವಧೆಗೆ ಯತ್ನಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸಮುಚ್ಚಯ ಪೊಲೀಸ್ ಠಾಣೆಯ ಮುಂದೆ ತಾ. 9 ರಂದು (ಇಂದು) ಸಾಮಾಜಿಕ ಅಂತರ ಕಾಯ್ದುಕೊಂಡು ಮುಷ್ಕರ ನಡೆಸುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ.
ಪ್ರಕರಣ ದಾಖಲು : ಈ ನಡುವೆ ಅಮ್ಮತ್ತಿಯ ಕೆ.ಎಂ. ಅಂದು ಎಂಬವರ ಮನೆಯಿಂದ ಎರಡು ಹಸುಗಳನ್ನು ಕಳವು ಮಾಡಿ ಎಂಜಿಲಗೆರೆ ಕಡೆಗೆ ಸಾಗಿಸುತ್ತಿದ್ದರೆಂದು ಆರೋಪಿಸಿ ಇಲ್ಲಿನ ಗ್ರಾಮಾಂತರ ಪೊಲೀಸರು ಕಳವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹಸುಗಳನ್ನು ಕಳವು ಮಾಡಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಆರೋಪಿಗಳಿಗೆ ಸೇರಿದ ಎರಡು ಬೈಕ್‍ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಕಳವು ಪ್ರಕರಣದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.