ಪೆರಾಜೆ, ಏ. 7 : ಪೆರಾಜೆ ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ಜಾಗೃತಿ ಸಭೆಯನ್ನು ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈದ್ಯಕೀಯ, ಆಹಾರ ಸಾಮಗ್ರಿಗಳ ಕೊರತೆ ಮತ್ತು ಹೊರ ದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಗ್ರಾಮಕ್ಕೆ ಬಂದವರ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಗ್ರಾ.ಪಂ.ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸದಸ್ಯರುಗಳಾದ ಪ್ರಕಾಶ್ ದೊಡ್ಡಡ್ಕ, ಅಡ್ಕದ ಚಿನ್ನಪ್ಪ, ಉದಯಚಂದ್ರ ಕುಂಬಳಚೇರಿ, ಶೀಲಾ ಚಿದಾನಂದ ನಿಡ್ಯಮಲೆ ಹಾಗೂ ಸಂಪಾಜೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶೈಲಜಾ, ಜಯಶ್ರೀ, ರಘು, ಚಿರಂತನ ಕ್ಲಿನಿಕ್ ಪೆರಾಜೆ ಇದರ ವೈದ್ಯ ಡಾ. ಲಕ್ಷ್ಮೀಶ ಕಲ್ಲುಮುಟ್ಲು, ವೈದ್ಯರಾದ ಅಶೋಕ ನಿಡ್ಯಮಲೆ, ಸಂಪಾಜೆ ಪೊಲೀಸ್ ಠಾಣೆಯ ಸಿಬ್ಬಂದಿ ಸೈಮನ್, ಗ್ರಾಮ ಲೆಕ್ಕ ಅಧಿಕಾರಿ ರಮೇಶ್ ಹಾಗೂ ಗ್ರಾಮದ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು ಸ್ವಾಗತಿಸಿ, ಪಂಚಾಯತ್ ಕಾರ್ಯದರ್ಶಿ ಕುಮಾರ್ ವಂದಿಸಿದರು.