ಸೋಮವಾರಪೇಟೆ, ಮಾ. 6: ಕೊರೊನಾ ವೈರಸ್ ಹಿನ್ನೆಲೆ ಲಾಕ್ಡೌನ್ ಆಗಿರುವ ಪ್ರಸ್ತುತ ಸಂದರ್ಭದಲ್ಲಿ ತುರ್ತು ಆರೋಗ್ಯ ಸಂಬಂಧಿತ ಸೇವೆಗಳನ್ನು ಪಡೆಯುವ ಮಂದಿಯ ನೆರವಿಗೆ ಕರ್ನಾಟಕ ರಕ್ಷಣಾ ವೇದಿಕೆ ಧಾವಿಸಿದ್ದು, ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ 10 ಕಿ.ಮೀ. ಅಂತರದೊಳಗೆ ಉಚಿತ ವಾಹನ ಸೌಲಭ್ಯ ಒದಗಿಸಿದೆ.
ಪಟ್ಟಣದಲ್ಲಿರುವ ಆಸ್ಪತ್ರೆಗೆ ಆಗಮಿಸಲು ಮತ್ತು ಆಸ್ಪತ್ರೆಯಿಂದ ವಾಪಸ್ ಮನೆಗೆ ಹೋಗಲು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಅವರು ವಾಹನದ ಸೌಲಭ್ಯ ಒದಗಿಸಿದ್ದು, ಅಗತ್ಯವಿರುವ ಮಂದಿ ಈ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ.
ಕೆ.ಎನ್. ದೀಪಕ್ ಅವರು ತಮ್ಮಲ್ಲಿರುವ 2 ಬಾಡಿಗೆ ವಾಹನವನ್ನು ಈ ಸೇವೆಗೆ ಉಚಿತವಾಗಿ ನೀಡಿದ್ದಾರೆ. ಕೆ.ಎ. 19 ಡಿ. 4759 ಸಂಖ್ಯೆಯ ಟವೇರಾ ಹಾಗೂ ಕೆ.ಎ. 01 ಸಿ. 2287 ಸಂಖ್ಯೆಯ ಇನ್ನೋವಾ ಕಾರನ್ನು ಉಚಿತ ಸೇವೆಗೆ ಒದಗಿಸಿದ್ದಾರೆ. ಸೋಮವಾರಪೇಟೆ ಪಟ್ಟಣದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ, ಬಡವರು, ಗರ್ಭಿಣಿಯರು, ಮಕ್ಕಳು, ವಯೋವೃದ್ಧರಿಗೆ ತುರ್ತು ಅವಶ್ಯವಿದ್ದಲ್ಲಿ ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.
ಉಚಿತ ವಾಹನ ಸೇವೆ ಬಳಸಿಕೊಳ್ಳುವವರು ಮೊ. 9972707718, 7259275219, 8762818143 ಸಂಖ್ಯೆಗಳಿಗೆ ಕರೆಮಾಡಿ ಮಾಹಿತಿ ನೀಡಿದ್ದಲ್ಲಿ, ವಾಹನಗಳು ತಮ್ಮ ಬಳಿ ಆಗಮಿಸಲಿವೆ. 10 ಕಿ.ಮೀ. ವ್ಯಾಪ್ತಿಯಲ್ಲಿ ಈ ಸೇವೆಯನ್ನು ನೀಡಲಾಗುತ್ತಿದ್ದು, ಅಗತ್ಯವಿರುವವರು ಇದರ ಸದುಪಯೋಗಪಡಿಸಿ ಕೊಳ್ಳಬಹುದು ಎಂದು ಕರವೇ ತಾಲೂಕು ಅಧ್ಯಕ್ಷ ದೀಪಕ್ ತಿಳಿಸಿದ್ದಾರೆ.